Advertisement

ಹೊನ್ನ ಹುಡಿ ಫೋಟೋಗೆ ಪ್ರಥಮ ಬಹುಮಾನ

11:54 AM Feb 10, 2019 | Team Udayavani |

ಕೊಪ್ಪಳ: ಖ್ಯಾತ ಕಲಾ ವಿಮರ್ಶಕ ಎ. ಈಶ್ವರಯ್ಯ ಸ್ಮರಣಾರ್ಥ ‘ನೆಲದ ನೆಲೆ-ಗ್ರಾಮೀಣ ಸೊಬಗಿನ ನೈಜ ಚಿತ್ರಣ’ ವಿಷಯದಡಿ ನಡೆದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಭರತ್‌ ಕಂದಕೂರಗೆ ಪ್ರಥಮ ಬಹುಮಾನ ಲಭಿಸಿದೆ.

Advertisement

ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಬಿಳಿಕಲ್ಲು ಪ್ರಕಾಶನ ಹಾಗೂ ಫೋಕಸ್‌ ಸ್ಟುಡಿಯೋದ ಸಹಯೋಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 115ಕ್ಕೂ ಹೆಚ್ಚು ಛಾಯಾಗ್ರಾಹಕರ ಸುಮಾರು 400ಕ್ಕೂ ಹೆಚ್ಚು ಛಾಯಾಚಿತ್ರಗಳಿದ್ದವು. ಕೊಪ್ಪಳದ ಭರತ್‌ ಕಂದಕೂರ ಅವರ ‘ಹೊನ್ನ ಹುಡಿ’ ಶೀರ್ಷಿಕೆಯ ಛಾಯಾಚಿತ್ರ ಅಂತಿಮ ಸುತ್ತಿನಲ್ಲಿ ಬಹುಮಾನ ಪಡೆದುಕೊಂಡಿದೆ. ಶುಕ್ರವಾರ ನಡೆದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ 5 ಸಾವಿರ ರೂ. ನಗದು, ಪಾರಿತೋಷಕ ನೀಡಿ ಗೌರವಿಸಲಾಯಿತು.

ಖ್ಯಾತ ಅಂತಾರಾಷ್ಟ್ರೀಯ ಛಾಯಾಗ್ರಾಹಕ ಗುರುದಾಸ್‌ ಕಾಮತ್‌ ಹಾಗೂ ಫೋಕಸ್‌ ರಘು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್‌. ಲಿಂಗದೇವರು, ಸಿನಿಮಾ ವಿಮರ್ಶಕ, ಪತ್ರಕರ್ತ ಗಿರೀಶ್‌ರಾವ್‌ (ಜೋಗಿ), ಕಾಲೇಜಿನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್‌, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ ಕಾಮತ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next