Advertisement

ಏಮ್ಸ್‌ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕನಿಗೆ ದೇಶದ ಮೊಟ್ಟ ಮೊದಲ ಲಸಿಕೆ!

09:22 PM Jan 16, 2021 | sudhir |

ನವದೆಹಲಿ: ದೇಶದ ಮೊಟ್ಟ ಮೊದಲ ಲಸಿಕೆ ಪಡೆಯುವ ಭಾಗ್ಯ ಲಭಿಸಿದ್ದು, 33 ವರ್ಷದ ಮನೀಶ್‌ ಕುಮಾರ್‌ಗೆ. ನವದೆಹಲಿ ಏಮ್ಸ್‌ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿರುವ ಮನೀಶ್‌ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಸಮ್ಮುಖದಲ್ಲಿ ಲಸಿಕೆ ನೀಡಲಾಯಿತು.

Advertisement

ಬಳಿಕ ಮಾತನಾಡಿದ ಮನೀಶ್‌, “ಇದೊಂದು ಬಹಳ ಸುಂದರ ಅನುಭವ. ಲಸಿಕೆ ಪಡೆಯುವಾಗ ನಾನು ಹಿಂಜರಿಯಲಿಲ್ಲ. ಜನರಿಗೂ ಈ ಬಗ್ಗೆ ಯಾವುದೇ ಆತಂಕ ಬೇಡ. ಲಸಿಕೆ ಕುರಿತಾಗಿ ನನ್ನೊಳಗೆ ಈಗ ಯಾವ ಗೊಂದಲಗಳೂ ಇಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಿ’ ಎಂದು “ಎಎನ್‌ಐ’ಗೆ ಹೇಳಿದ್ದಾರೆ.

“ಹಲವು ಮಂದಿ ಲಸಿಕೆ ಪಡೆಯಲು ಅಂಜುತ್ತಿದ್ದಾಗ, ನಾನು ಸ್ವಪ್ರೇರಣೆಯಿಂದ ಮುಂದೆ ಬಂದೆ. ನನಗೇ ಮೊದಲು ಲಸಿಕೆ ಚುಚ್ಚಿ ಎಂದು ಅಧಿಕಾರಿಗಳನ್ನು ಕೇಳಿಕೊಂಡೆ. ನನಗೆ ಇಲ್ಲಿಯತನಕ ಯಾವುದೇ ಅಡ್ಡಪರಿಣಾಮಗಳಾಗಿಲ್ಲ’ ಎಂದು ತಿಳಿಸಿದರು.
ಮನೀಶ್‌ ಕಳೆದ 8 ವರ್ಷಗಳಿಂದ ಏಮ್ಸ್‌ನಲ್ಲಿ ಸ್ವಚ್ಛತಾ ಕಾರ್ಮಿಕ. ಸೋಂಕಿತರು ವಾರ್ಡ್‌ಗಳಲ್ಲಿ ತುಂಬಿ ತುಳುಕುತ್ತಿದ್ದಾಗ, ಜೀವ ಪಣಕ್ಕಿಟ್ಟು ಸ್ವತ್ಛತೆ ನಡೆಸಿದ್ದ ದಿಟ್ಟ ಸೇವಕ.

ಇದನ್ನೂ ಓದಿ:ಗೋವಾ ಚಿತ್ರೋತ್ಸವಕ್ಕೆ ಸುದೀಪ್‌ ಚಾಲನೆ : ಕನ್ನಡದಲ್ಲೇ ಮಾತು ಆರಂಭಿಸಿದ ಕಿಚ್ಚ

ಅಂದಹಾಗೆ, ದೇಶದ 2ನೇ ಲಸಿಕೆ ಪಡೆದಿದ್ದು ಹೆಲ್ತ್‌ಕೇರ್‌ ಸಿಬ್ಬಂದಿ ಧವಳ್‌ ದ್ವಿವೇದಿ ಎಂಬುವವರು.

Advertisement

ಇದೊಂದು ಬಹಳ ಸುಂದರ ಅನುಭವ. ಲಸಿಕೆ ಪಡೆಯುವಾಗ ನಾನು ಹಿಂಜರಿಯಲಿಲ್ಲ. ಜನರಿಗೂ ಈ ಬಗ್ಗೆ ಯಾವುದೇ ಆತಂಕ ಬೇಡ. ಲಸಿಕೆ ಕುರಿತಾಗಿ ನನ್ನೊಳಗೆ ಈಗ ಯಾವ ಗೊಂದಲಗಳೂ ಇಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಿ. ಹಲವು ಮಂದಿ ಲಸಿಕೆ ಪಡೆಯಲು ಅಂಜುತ್ತಿದ್ದಾಗ, ನಾನು ಸ್ವಪ್ರೇರಣೆಯಿಂದ ಮುಂದೆ ಬಂದೆ. ನನಗೇ ಮೊದಲು ಲಸಿಕೆ ಚುಚ್ಚಿ ಎಂದು ಅಧಿಕಾರಿಗಳನ್ನು ಕೇಳಿಕೊಂಡೆ. ನನಗೆ ಇಲ್ಲಿಯತನಕ ಯಾವುದೇ ಅಡ್ಡಪರಿಣಾಮಗಳಾಗಿಲ್ಲ.
– ಮನೀಶ್‌, ಸ್ವಚ್ಛತಾ ಕಾರ್ಮಿಕ

Advertisement

Udayavani is now on Telegram. Click here to join our channel and stay updated with the latest news.

Next