Advertisement
1. ಆಕೆಯ ಜೊತೆ ಮುಕ್ತವಾಗಿ ಮಾತಾಡಿ…ಹೆಣ್ಣು ಮೊದಲ ಬಾರಿಗೆ ಋತುಮತಿಯಾದಾಗ ಹಾರ್ಮೋನ್‌ಗಳ ಬದಲಾವಣೆಗಳಿಂದ ಮಾನಸಿಕವಾಗಿ ನೊಂದುಕೊಳ್ಳುತ್ತಾಳೆ. ಈ ವೇಳೆ ಮನದಲ್ಲಿ ಏನೋ ಭಯ ಆವರಿಸುತ್ತದೆ. ಈ ಸಂದರ್ಭದಲ್ಲಿ ತಾಯಿಯು ಮಗಳಿಗೆ, ಋತುಚಕ್ರದ ಬಗ್ಗೆ ಅರಿವನ್ನು ಮೂಡಿಸಬೇಕು. ಆಕೆಯ ಭಾವನೆಗಳಿಗೆ ಮುಕ್ತವಾಗಿ ಸ್ಪಂದಿಸಬೇಕು.
ಮಗಳು ಋತುಮತಿಯಾಗುವ ಸಂದರ್ಭ ಹತ್ತಿರಬಂದಂತೆ ಎಲ್ಲ ಜವಾಬ್ದಾರಿಗಳನ್ನು ಆಕೆಯ ಮೇಲೆ ಹಾಕಬೇಡಿ. ಇದರಿಂದಾಗಿ ಅವಳು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ನೀವೇ ಅವಳಿಗೆ ಅಗತ್ಯವಾಗಿ ಬೇಕಾಗುವ ವಸ್ತುಗಳನ್ನು ಖರೀದಿ ಮಾಡಿ, ಅವರ ಬಳಿ ಅದು ಯಾವಾಗಲೂ ಇರುವಂತೆ ನೋಡಿಕೊಳ್ಳಿ. 3. ವಸ್ತುಗಳ ಬಳಕೆಯ ಬಗ್ಗೆ ಅರಿವು
ಋತುಸ್ರಾವದ ಸಂದರ್ಭದಲ್ಲಿ ಪ್ಯಾಡ್‌ಗಳ ಬಳಕೆ ಯಾವ ತರಹ ಮಾಡಬೇಕು ಎಂಬುದನ್ನು ಮಗಳಿಗೆ ಸೂಕ್ತವಾಗಿ ತಿಳಿಸಿ. ಬಟ್ಟೆಗಳನ್ನು ಬಳಸುವಾಗ ಒಣಗಿದ ಮೃದುವಾದ ಹತ್ತಿಯ ಬಟ್ಟೆಗಳನ್ನು ಬಳಸಲು ಸಲಹೆ ನೀಡಿ. ಆ ದಿನಗಳಲ್ಲಿ ಯಾವ ರೀತಿ ಸುರಕ್ಷಿತವಾಗಿರಬೇಕು, ಸ್ವತ್ಛತೆಯಿಂದ ಇರಬೇಕು ಎಂಬುದನ್ನೂ ತೀಳಿ ಹೇಳಿ.
Related Articles
ಋತುಚಕ್ರದ ವೇಳೆ ಅತಿಯಾದ ರಕ್ತಸ್ರಾವ ಆಗುತ್ತದೆ. ನಿರಂತರ ರಕ್ತಸ್ರಾವದಿಂದ ಅಶಕ್ತರಾಗುವ ಸಾಧ್ಯತೆಗಳಿರುತ್ತವೆ. ಈ ವೇಳೆ ಮಗಳಿಗೆ ಪೌಷ್ಟಿಕವಾದ ಆಹಾರವನ್ನು ನೀಡಿ. ಅವಶ್ಯ ಇದ್ದಾಗ ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತ.
Advertisement
5. ಮಾನಸಿಕ ಸ್ಥೈರ್ಯಋತುಮತಿಯು ಹಲವು ಮಾನಸಿಕ ತೊಳಲಾಟಗಳು ಮತ್ತು ಅನುಮಾನಗಳ ಹೊರೆ ಹೊತ್ತು ಬಳಲುತ್ತಿರುತ್ತಾಳೆ. ಋತುಮತಿಯನ್ನು ಏಕಾಂಗಿಯಾಗಿರಲು ಬಿಡದೆ, “ನಿನ್ನೊಂದಿಗೆ ನಾನಿದ್ದೇನೆ’ ಎಂದು ಮಾನಸಿಕವಾಗಿ ಧೈರ್ಯ ತುಂಬಬೇಕು. 6. ವಿಶ್ರಾಂತಿ ಮುಖ್ಯ
ಋತುಮತಿಯರು ಮಾನಸಿಕವಾಗಿ ಮಾತ್ರವಲ್ಲದೆ, ದೈಹಿಕವಾಗಿ ಅಸ್ವಸ್ಥರಾಗುವುದು ಸಾಮಾನ್ಯ. ಮಹಿಳೆ ಎಂದಮಾತ್ರಕ್ಕೆ ಹಗಲು ರಾತ್ರಿ ಎನ್ನದೆ ನಿರಂತರವಾಗಿ ಕೆಲಸ ಮಾಡದೆ, ಹೆಚ್ಚು ಸಮಯವನ್ನು ವಿಶ್ರಾಂತಿಗಾಗಿ ಮಿಸಲಿಡಬೇಕು. ತ್ರಾಸದಾಯಕ ಕೆಲಸಗಳನ್ನು ಈ ವೇಳೆ ಮಾಡಬಾರದು. ವಹೀದಾ ನದಾಫ, ವಿಜಯಪುರ