Advertisement
ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಜಿರೆ ಎಸ್‌ಡಿಎಂ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ) ಕಾಲೇಜು ಸುದೀರ್ಘ 55 ವರ್ಷಗಳನ್ನು ಪೂರೈಸಿದ್ದು ಸಹಸ್ರಾರು ವಿದ್ಯಾವಂತರನ್ನು ಸಮಾಜಕ್ಕೆ ನೀಡಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ತಮ್ಮದೇ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ಶಿಕ್ಷಣ ಸಂಸ್ಥೆಯ ಹೆಸರಲ್ಲಿ ಜತೆಯಾಗುವ ನಿರ್ಧಾರ ಕೈಗೊಂಡಿದ್ದರಿಂದ ಎಸ್‌ಡಿಎಂಸಿಯ ಗ್ಲೋಬಲ್ ಅಲುಮ್ನಿ ಕೋರ್ ಕಮಿಟಿ ರಚನೆಯಾಗಿದೆ.
Related Articles
Advertisement
ಎಸ್‌ಡಿಎಂನ ಹಳೆ ವಿದ್ಯಾರ್ಥಿಗಳ ಸಂಘಟನೆಗೆ ಗ್ಲೋಬಲ್ ಅಲುಮ್ನಿ ಎಂದು ಹೆಸರಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಗುಂಪಿನಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಸದಸ್ಯರು ವಿವಿಧ ಮಾರ್ಗಗಳ ಬಗ್ಗೆ ಚರ್ಚಿಸಿದರು. ವಿವಿಧ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಸದಸ್ಯರನ್ನು ಹುಡುಕಲು ನಿರ್ಧರಿಸಲಾಯಿತು. ಸದಸ್ಯತ್ವ ಆಹ್ವಾನದ ಮೇರೆಗೆ ಇರಬೇಕು ಮತ್ತು ಹಳೆ ವಿದ್ಯಾರ್ಥಿಗಳ ಭವಿಷ್ಯದ ರಾಯಭಾರಿಗಳಾಗಿರಬಹುದಾದ ಸದಸ್ಯರನ್ನು ಸೇರಿಸುವ ಉದ್ದೇಶದಿಂದ ಎಲ್ಲ ಹೊಸ ಸದಸ್ಯರ ಹಿನ್ನೆಲೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಯಿತು.
ಕಾರ್ಯಾಚರಣೆ ಸುಲಭವಾಗಲು ಉಜಿರೆಯನ್ನು ಮುಖ್ಯ ಭಾಗವೆಂದು ಪರಿಗಣಿಸಲು ನಿರ್ಧರಿಸಲಾಯಿತು. ಎಸ್‌ಡಿಎಂಸಿಯು ಬೆಂಗಳೂರು ಅಧ್ಯಾಯದ ಹಳೆ ವಿದ್ಯಾರ್ಥಿಗಳ ಹೆಚ್ಚಿನ ನಿಬಂಧನೆಗಳನ್ನು ಅಂಗೀಕರಿಸುವ ಉಪ ಕಾನೂನನ್ನು ರೂಪಿಸಲು ನಿರ್ಧರಿಸಲಾಯಿತು. ನೋಂದಣಿಗಾಗಿ ವಕೀಲರಿಂದ ಕಾನೂನು ಅಭಿಪ್ರಾಯ ಪಡೆಯಲು ಮತ್ತು ನೋಂದಣಿಯ ವಿವಿಧ ಆವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಅಲ್ಲದೇ ಸದಸ್ಯರಿಗೆ ಯಾವುದೇ ಸದಸ್ಯತ್ವ ಶುಲ್ಕ ವಿಧಿಸದಿರಲು ನಿರ್ಧರಿಸಿದ್ದು, ಹಣದ ಅಗತ್ಯವಿದ್ದರೆ ಸದಸ್ಯರು ಅಗತ್ಯ ಆಧಾರದ ಮೇಲೆ ಚಟುವಟಿಕೆ ನಡೆಸಿ ಅದರಿಂದ ಹಣ ಸಂಗ್ರಹಿಸುವ ತೀರ್ಮಾನ ಕೈಗೊಳ್ಳಲಾಯಿತು.
ಅಲುಮ್ನಿಯ ಮುಖ್ಯ ಉದ್ದೇಶಗಳಲ್ಲಿ ಫೆಲೋಶಿಪ್, ಸಂಪರ್ಕ, ಸಹಕಾರಿ ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಮಾರ್ಗದರ್ಶನ, ವಿದ್ಯಾರ್ಥಿಗಳಿಗೆ ಸಭೆ ಮತ್ತು ಸಂವಹನಾತ್ಮಕ ಅಧಿವೇಶನ- ಆಫ್ಲೈನ್, ಆನ್‌ಲೈನ್‌ನಲ್ಲಿ ಜಾಗತಿಕ ತಾಪಮಾನ ಏರಿಕೆ ವಿಷಯಗಳನ್ನು ಪರಿಗಣಿಸಲಾಗಿದೆ.
ಜೂನ್ ಅಂತ್ಯದೊಳಗೆ ಉದ್ಘಾಟನೆ
2021ರ ಜೂನ್ ತಿಂಗಳಾಂತ್ಯದ ಮೊದಲು ಹಳೆ ವಿದ್ಯಾರ್ಥಿಗಳ ಅಲುಮ್ನಿಯ ಉದ್ಘಾಟನೆ ನಡೆಸಲು ಸರ್ವಾನುಮತದಿಂದ ಒಪ್ಪಲಾಯಿತು. ಇದಕ್ಕಾಗಿ ವಿವಿಧ ಸ್ಥಳ ಗುರುತುಗಳನ್ನು ಮಾಡಿ ಕಾರ್ಯದ ಉಸ್ತುವಾರಿಗೆ ಸದಸ್ಯರನ್ನು ನಿಯೋಜಿಸಲಾಯಿತು. ಈ ಸಭೆಯೊಂದಿಗೆ ಒಟ್ಟಾಗಿ ಕೆಲಸ ಮಾಡುವ ನಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದು ಡಾ| ಉದಯ ಚಂದ್ರ ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಹಳೆ ವಿದ್ಯಾರ್ಥಿಗಳಿಗೆ ಡಾ| ಸತೀಶ್ ಚಂದ್ರ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಎಸ್‌ಡಿಎಂ ಕಾಲೇಜಿನ ಬಗ್ಗೆ ನಿಮ್ಮ ಗೌರವ ಮತ್ತು ಸಾಮಾಜಿಕ ಕಾಳಜಿಯ ಬದ್ಧತೆಗಾಗಿ ಶುಭಾಶಯಗಳು. ನಾವು ಒಟ್ಟಾಗಿ ಕೆಲಸ ಮಾಡೋಣ ಮತ್ತು ಎಸ್‌ಡಿಎಂ ಧ್ವಜವನ್ನು ಎತ್ತರಕ್ಕೆ ಹಾರಿಸೋಣ ಎಂದು ಹೇಳಿದರು.
ಕೋರ್ ಕಮಿಟಿ ಸಭೆಯಲ್ಲಿ ಎಸ್‌ಡಿಎಂಸಿಯ ಬೆಂಗಳೂರು ಚಾಪ್ಟರ್‌ನ ಎಚ್.ಎನ್. ಹೊಳ್ಳ, ದುಬೈಯ ಅಬ್ದುರ್ ರಜಾಕ್ ಉಜಿರೆ, ರೋಷನ್ ಪಿಂಟೋ, ಕುತುಬುದ್ದೀನ್, ಚೇತನಾ, ಅಬ್ದುಲ್ ಖಾದರ್, ಜರ್ಮನಿಯ ಶರತ್, ಮಲೇಷ್ಯಾದ ಕಿರಣ್ ಭಾಗವಹಿಸಿದ್ದರು.ರಾಜೇಶ್ ಬೆಂಗ್ರಾಡಿ ಸ್ವಾಗತಿಸಿದರು. ಕೊನೆಗೆ ಅಬ್ದುಲ್ಲ ಮಾದುಮೂಲೆ ಅವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.