Advertisement

“ಕಾಂಡೋಮ್” ಹಿಡಿದು ಬಂದ ಛತ್ರಿವಾಲಿ ನಟಿ ರಾಕುಲ್ ಪ್ರೀತ್ ಸಿಂಗ್!

03:00 PM Nov 13, 2021 | Team Udayavani |

ಮುಂಬಯಿ: ಬಾಲಿವುಡ್ ನ ಬಹುಬೇಡಿಕೆಯ ನಟಿ ರಾಕುಲ್ ಪ್ರೀತ್ ಸಿಂಗ್ ಈಗಾಗಲೇ ಹಲವಾರು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದು, ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಹೌದು ತಮ್ಮ ಮುಂಬರುವ ಸಿನಿಮಾದ ಫಸ್ಟ್ ಲುಕ್ ನಲ್ಲಿ “ಕಾಂಡೋಮ್” ಹಿಡಿದುಕೊಂಡು ಬರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

Advertisement

ಇದನ್ನೂ ಓದಿ:ಅಪಘಾತವಾಗಿ ಬಿದ್ದಿದ್ದ ಯುವಕರಿಗೆ ಉಪಚರಿಸಿ ಮಾನವೀಯತೆ ಮೆರೆದ ಆರಗ ಜ್ಞಾನೇಂದ್ರ

ತಮ್ಮ ಮುಂಬರುವ “ಛತ್ರಿವಾಲಿ” ಎಂಬ ಹೊಸ ಸಿನಿಮಾದಲ್ಲಿ ರಾಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಲಕ್ನೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಛತ್ರಿವಾಲಿ ಸಿನಿಮಾದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ನಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಕಾಂಡೋಮ್ ಅನ್ನು ಹಿಡಿದು ಬರುವ ಮೂಲಕ ಸಿನಿ ಪ್ರಿಯರಿಗೆ ಅಚ್ಚರಿ ಹುಟ್ಟಿಸಿದ್ದಾರೆ. ಛತ್ರಿವಾಲಿ ಸಿನಿಮಾದಲ್ಲಿ ರಾಕುಲ್ ಕಾಂಡೋಮ್ ಪರೀಕ್ಷೆ ಮಾಡುವ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

Advertisement

ಬಾಲಿವುಡ್ ನ ಛತ್ರಿವಾಲಿ ಸಾಮಾಜಿಕ ಕೌಟುಂಬಿಕ ಕಾಮಿಡಿ ಸಿನಿಮಾವಾಗಿದೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಯುವತಿಯೊಬ್ಬಳು ತನಗೆ ಕೆಲಸವಿಲ್ಲದೇ ನಿರಾಸೆಗೊಳಗಾದಾಗ ಕರ್ನಲ್ ಎಂಬ ಪುಟ್ಟ ಊರಿನಲ್ಲಿ ಕಾಂಡೋಮ್ ಪರೀಕ್ಷೆ ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾಳೆ. ಕಾಂಡೋಮ್ ಪರೀಕ್ಷಳಾಗಿ ಹೇಗೆ ಕೆಲಸ ಮಾಡುತ್ತಾಳೆ ಎಂಬ ಕಥಾ ಹಂದರ ಛತ್ರಿವಾಲಿ ಸಿನಿಮಾದ್ದಾಗಿದೆ.

ರಾಕುಲ್ ಈಗಾಗಲೇ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಛತ್ರಿವಾಲಿಯಲ್ಲಿಯೂ ಅವರು ಹೊಸ ಪಾತ್ರದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಕಾಮಿಡಿ ಸಿನಿಮಾವನ್ನು ಪ್ರೇಕ್ಷಕರು ಖಂಡಿತ ಒಪ್ಪಿಕೊಳ್ಳುತ್ತಾರೆ. ಅಲ್ಲದೇ ಛತ್ರಿವಾಲಿಯಲ್ಲಿ ರಾಕುಲ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂಬ ನಂಬಿಕೆ ಇದ್ದಿರುವುದಾಗಿ ನಿರ್ದೇಶಕ ತೇಜಸ್ ಡಿಯೋಸ್ಕರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next