ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಮುನ್ನವೇ ಪ್ರತಿಪಕ್ಷ ಕಾಂಗ್ರೆಸ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ 15 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಈ ಪಟ್ಟಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರಿಯಾಂಕಾ ವಾದ್ರಾ ಅವರ ಹೆಸರು ಸೇರ್ಪಡೆಯಾಗಿಲ್ಲ. ಗುಜರಾತ್‌ನಿಂದ ನಾಲ್ವರು, ಉತ್ತರ ಪ್ರದೇಶದಿಂದ 11 ಮಂದಿ ಹುರಿಯಾಳುಗಳ ವಿವರ ನೀಡಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಫರೂಖಾಬಾದ್ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.
ಗಮನಾರ್ಹವೆಂದರೆ, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಇದುವರೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಗುಜರಾತ್‌ನ ಅಹಮದಾಬಾದ್ ಪಶ್ಚಿಮದಿಂದ ರಾಜು ಪರ್ಮಾರ್, ಆನಂದ್‌ನಿಂದ ಭರತ್ ಸಿಂಗ್ ಸೋಲಂಕಿ, ವಡೋದರಾದಿಂದ ಪ್ರಶಾಂತ್ ಪಟೇಲ್, ಛೋಟಾ ಉದಯಪುರದಿಂದ ರಂಜಿತ್ ಮೋಹನ್ ಸಿಂಗ್ ರತ್ವಾ ಕಣಕ್ಕೆ ಇಳಿಯಲಿದ್ದಾರೆ.
ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿ, ಅಮೇಠಿಯಿಂದ ರಾಹುಲ್ ಗಾಂಧಿ, ಸಹರಾನ್ಪುರದಿಂದ ಇಮ್ರಾನ್ ಮಸೂದ್, ಬದೌನ್‌ನಿಂದ ಸಲೀಂ ಇಕ್ಬಾಲ್ ಶೇರ್ವಾನಿ, ದೌಹ್ರಾಹ್ರದಿಂದ ಜಿತನ್ ಪ್ರಸಾದ, ಉನ್ನಾವೋದಿಂದ ಅನ್ನು ಟಂಡನ್, ಫೈಜಾಬಾದ್‌ನಿಂದ ನಿರ್ಮಲ್ ಖತ್ರಿ, ಖುಶೀನಗರದಿಂದ ಆರ್.ಪಿ.ಎನ್.ಸಿಂಗ್, ಜಲೌನ್‌ನಿಂದ ಬೃಜ್‌ಲಾಲ್ ಖಬ್ರಿ ಕಣಕ್ಕೆ ಇಳಿಯಲಿದ್ದಾರೆ.
ಇಂದು ಬಿಜೆಪಿ ಸಭೆ: ಮತ್ತೂಂದೆಡೆ ಹೊಸದಿಲ್ಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಶುಕ್ರವಾರ ನಡೆಯಲಿದೆ.