Advertisement

ಟೋಲ್‌ ಇಲ್ಲದ ಮೊದಲ ಹೆದ್ದಾರಿ: ಕೇಂದ್ರ ಸಚಿವೆ ಶೋಭಾ

11:44 PM Sep 30, 2022 | Team Udayavani |

ಹೆಬ್ರಿ: ರಾಜ್ಯಾದ್ಯಂತ ಎಲ್ಲ ರಾಷ್ಟ್ರಿಯ ಹೆದ್ದಾರಿಗಳು ಟೋಲ್‌ ವ್ಯಾಪ್ತಿಗೆ ಒಳಪಡುತ್ತವೆ. ಆದರೆ ಮಲ್ಪೆ ಯಿಂದ ಹೆಬ್ರಿಗೆ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆ ನೇರ ಕೇಂದ್ರ ಸರಕಾರದ ವ್ಯವಸ್ಥೆಯಲ್ಲಿದ್ದು ಟೋಲ್‌
ಇಲ್ಲದೆ ನಿರ್ಮಾಣವಾಗುವ ರಸ್ತೆಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅವರು ಶುಕ್ರವಾರ 369 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಬ್ರಿ – ಪರ್ಕಳ – ಕರಾವಳಿ ಬೈಪಾಸ್‌ – ಮಲ್ಪೆ ನಡುವಣ ರಾ.ಹೆ. 169 ಎಯ ಚತುಷ್ಪಥ ಕಾಮಗಾರಿಗೆ ಪೆರ್ಡೂರು ದೇವಸ್ಥಾನ ಬಳಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಪ್ರವಾಸಿ ತಾಣವಾದ ಮಲ್ಪೆ ರಸ್ತೆ ವಿಸ್ತರಣೆಯಾಬೇಕು ಎಂಬುದು ಬಹಳ ವರ್ಷಗಳ ಬೇಡಿಕೆ. ಇದೀಗ ಪೂರ್ಣಗೊಳ್ಳುತ್ತಿದೆ. ಬೇಡಿಕೆ ಇರುವ ಎಲ್ಲ ರಸ್ತೆಗಳಿಗೆ ಅತೀ ಶೀಘ್ರ ಅನುದಾನ ಬಿಡುಗಡೆಯಾಗಿದೆ ಎಂದರು.

2 ವರ್ಷದೊಳಗೆ ಪೂರ್ಣ
ಕಾಮಗಾರಿಯನ್ನು ವೇಗವಾಗಿ ನಡೆಸಿ 2 ವರ್ಷದೊಳಗೆ ಗುಣಮಟ್ಟದ ಚತುಷ್ಪಥ ರಸ್ತೆಯನ್ನು ಲೋಕಾರ್ಪಣೆ ಮಾಡುವ ಗುರಿ ಇದೆ. ಆಗುಂಬೆ ಘಾಟಿ ಸರ್ವೇ ನಡೆಯುತ್ತಿದ್ದು ಆದಷ್ಟು ಶೀಘ್ರ ಘಾಟಿ ರಸ್ತೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕರಂದ್ಲಾಜೆ ಅವರ ವಿಶೇಷ ಪರಿಶ್ರಮದಿಂದ ಹೆಬ್ರಿ ಮಲ್ಪೆ ರಸ್ತೆ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

Advertisement

ಉಡುಪಿ ಶಾಸಕ ರಘಪತಿ ಭಟ್‌, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಟ್ಟಾರು ರತ್ನಾಕರ ಹೆಗ್ಡೆ, ದೇವು ಪೂಜಾರಿ ಉಪಸ್ಥಿತರಿದ್ದರು.ಸುರೇಶ್‌ ಸೇರ್ವೆಗಾರ್‌ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next