Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಮಿಕ್ರಾನ್‌ನಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಎಲ್ಲರೂ ಲಸಿಕೆ ಪಡೆದುಕೊಳ್ಳುವುದು ಅತ್ಯಗತ್ಯ. ಜಿಲ್ಲೆಯ ಒಟ್ಟು 16 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದು ಇನ್ನೂ ಲಕ್ಷಕ್ಕೂ ಮಿಕ್ಕಿ ಮಂದಿ ಬಾಕಿ ಉಳಿದಿದ್ದಾರೆ ಎಂದವರು ವಿವರಿಸಿದರು.
ಜಿಲ್ಲೆಯಲ್ಲಿ ಕಂಡುಬಂದಿರುವ ಒಮಿಕ್ರಾನ್ ಪ್ರಕರಣಗಳ ಮೂಲ ಇನ್ನೂ ಪತ್ತೆಯಾಗಿಲ್ಲ, ಆದರೆ ಸೋಂಕಿತ ರೆಲ್ಲರೂ ಆರೋಗ್ಯವಾಗಿದ್ದಾರೆ, ಎಲ್ಲರಿಗೂ 10 ದಿನದ ಬಳಿಕ ಎರಡು ಬಾರಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದ ಕೂಡಲೇ ಅವರನ್ನು ಐಸೊಲೇಶನ್‌ನಿಂದ ಬಿಡುಗಡೆ ಮಾಡಲಾಗುತ್ತದೆ ಎಂದರು.
Related Articles
Advertisement
ಪ್ರಸ್ತುತ ಜಿಲ್ಲೆಯ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದು, ವರದಿ ಬರುವಾಗ ತಡವಾಗುತ್ತಿದೆ, ಅದಕ್ಕಾಗಿ ಮಂಗಳೂರಿನಲ್ಲೇ ಜೆನೋಮ್ ಸೀಕ್ವೆನ್ಸ್ ಲ್ಯಾಬ್ ಪ್ರಾರಂಭಿಸುವ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಇದನ್ನೂ ಓದಿ:ಓನ್ಲಿಫ್ಯಾನ್ಸ್ ಸಿಇಒ ಆಗಿ ಭಾರತ ಮೂಲದ ಆಮ್ರಪಾಲಿ ಗಾನ್
ಕುರ್ನಾಡು ಬಳಿಯ ವಸತಿಯುತ ಶಾಲೆಯೊಂದರಲ್ಲಿ ಕೆಲವು ಕ್ಲಸ್ಟರ್‌ಗಳಲ್ಲಿ ಪಾಸಿಟಿವ್ ಕೇಸು ಬಂದಿತ್ತು. ಸರಕಾರಕ್ಕೆ ವರದಿ ಮಾಡಿದಾಗ ಅದನ್ನು ಜೆರೋಮಿಕ್ ಸೀಕ್ವೆನ್ಸಸ್‌ಗೆ ಕಳುಹಿಸಲು ನಿರ್ದೇಶನ ನೀಡಲಾಗಿತ್ತು. ಒಂದು ನರ್ಸಿಂಗ್ ಕಾಲೇಜಿನ ಕ್ಲಸ್ಟರ್ ಕೇಸು ಬಂದಾಗ, ಅದನ್ನೂ ಕಳುಹಿಸಿದಾಗ, ಒಮಿಕ್ರಾನ್ ಮಾದರಿ ಪತ್ತೆಯಾಗಿತ್ತು. ಜವಾಹರ್ ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ದ.ಕ. ಜಿಲ್ಲೆಯವರೇ ಆಗಿದ್ದಾರೆ. ನಸಿಂಗ್ ಕಾಲೇಜಿನ ಒಬ್ಬ ವಿದ್ಯಾರ್ಥಿನಿ ಕೇರಳ ಮೂಲ ಬಿಟ್ಟರೆ, ಬೇರೆ ಯಾರೂ ಹೊರಗೆ ಹೋದ ಮಾಹಿತಿ ಇಲ್ಲ. ಘಾನದಿಂದ ಬಂದಿದ್ದ ಒಬ್ಬರಲ್ಲಿ ಪಾಸಿಟಿವ್ ಬಂದಿದ್ದು, ಆರಂಭದಲ್ಲಿ ರೋಗ ಲಕ್ಷಣವಿತ್ತು ಎಂದರು.ಜಿ. ಪಂ. ಸಿಇಒ ಡಾ| ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿದಿನ 7,500 ಮಂದಿಯ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 1.75 ಲಕ್ಷ ಪತ್ರ ಕೊಟ್ಟು, ವ್ಯಾಕ್ಸಿನ್ ಪಡೆಯದ ಹೆತ್ತವರ ಮಾಹಿತಿ ಪಡೆಯಲಾಗಿದೆ. ಬಹುತೇಕ ಮಂದಿ ಭಯ, ಕಾಯಿಲೆಯಿಂದ ಪಡೆದಿಲ್ಲ. ಅಂಥವರ ಮನೆಗೆ ತೆರಳಿ, ಜಾಗೃತಿ ಮೂಡಿಸಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಪ್ರಭಾರ ಆರೋಗ್ಯಾಧಿಕಾರಿ ಡಾ| ರಾಜೇಶ್, ಕೋವಿಡ್ ನೋಡಲ್ ಅಧಿಕಾರಿ ಡಾ| ಅಶೋಕ್ ಉಪಸ್ಥಿತರಿದ್ದರು. ಜಾಗೃತಿ ಅಗತ್ಯ
ಜಿಲ್ಲೆಯಲ್ಲಿ ಪ್ರಸ್ತುತ ಪಾಸಿಟಿವಿಟಿ ದರ ಶೇ 0.26ರಷ್ಟಿದ್ದು 35 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಟ್ಟು ಸಕ್ರಿಯ ಪ್ರಕರಣ 164 ಇದೆ. ಆದರೂ ಒಮಿಕ್ರಾನ್ ಪ್ರಭೇದದ ವೈರಸ್ ತೀರಾ ವೇಗವಾಗಿ ಪಸರಿಸುವ ಕಾರಣ ಜನರು ಮೈಮರೆಯದೆ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವುದು, ಕಾರ್ಯಕ್ರಮ ಆಯೋಜಿಸುವಲ್ಲಿ ಸ್ವಯಂ ನಿಯಂತ್ರಣ ಹೇರಿಕೊಳ್ಳುವ ಅಗತ್ಯವಿದೆ ಎಂದರು. ಮತದಾರರ ಪಟ್ಟಿಗೆ ಸೇರ್ಪಡೆ
ಜನವರಿಗೆ 18 ವರ್ಷ ತುಂಬುವ ಎಲ್ಲರನ್ನೂ ಮತದಾರರ ಪಟ್ಟಿಗೆ ಸೇರಿಸಲು ಜ. 3ರಂದು ಎಲ್ಲ ಕಾಲೇಜುಗಳಲ್ಲಿ ಸಾಮೂಹಿಕ ಅಭಿಯಾನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕಾಲೇಜಿಗೆ ದಾಖಲೆ ತಂದು, ತಮ್ಮ ಮೊಬೈಲ್‌ಗಳಲ್ಲಿ ವೋಟರ್ ಹೆಲ್ಪ್ಲೈನ್ ಆ್ಯಪ್ ಡೌನ್‌ಲೋಡ್ ಮಾಡಿ, ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಶಿಕ್ಷಕರ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಸುಮಾರು 25 ಸಾವಿರ ಮಂದಿಯ ಹೆಸರು ಸೇರ್ಪಡೆ ಗುರಿ ಇದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು. ದ.ಕ.: ಮತ್ತೊಂದು ಒಮಿಕ್ರಾನ್ ಪತ್ತೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಒಮಿಕ್ರಾನ್ ಭೀತಿ ಮತ್ತೆ ಎದುರಾಗಿದ್ದು, ಘಾನದಿಂದ ದುಬಾೖ ಮೂಲಕ ಮಂಗಳೂರಿಗೆ ಬಂದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರಿಗೆ ಒಮಿಕ್ರಾನ್ ಇರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಮಿಕ್ರಾನ್‌ಗೆ ಒಳಗಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಡಿ.16ರಂದು ಆಗಮಿಸಿದ ಇವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆಗ ಅವರಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಅವರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್‌ಗಾಗಿ ಡಿ.17ರಂದು ಬೆಂಗಳೂರಿಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು ಅವರಲ್ಲಿ ಒಮಿಕ್ರಾನ್ ಇರುವುದು ದೃಢಪಟ್ಟಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಯಾರೂ ಕೂಡ ಆತಂಕಕ್ಕೆ ಒಳಗಾಗಬೇಡಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.