ಪಣಜಿ : ದಕ್ಷಿಣ ಗೋವಾದಲ್ಲಿ ಕೋವಿಡ್ ರೂಪಾಂತರಿ ಡೆಲ್ಟಾ ಪ್ಲಸ್ ಮೊದಲ ಪ್ರಕರಣ ಪತ್ತೆಯಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಆತಂಕ ಹೆಚ್ಚುವಂತಾಗಿದೆ.
ಗೋವಾದಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಾಗೂ ರೂಪಾಂತರಿ ಕೋವಿಡ್ ಸೋಂಕಿನ ಶಂಕಿತರ ನಮೂನೆಯನ್ನು ತಪಾಸಣೆಗಾಗಿ ಗೋವಾ ಆರೋಗ್ಯ ಇಲಾಖೆಯು ಪುಣೆಯ ಲ್ಯಾ ಬ್‍ಗೆ ಕಳುಹಿಸುತ್ತಿತ್ತು. ಈ ಪೈಕಿ ಇದೀಗ ದಕ್ಷಿಣ ಗೋವಾದಿಂದ ಪುಣೆಗೆ ಕಳುಹಿಸಲಾಗಿದ್ದ ಕೋವಿಡ್ ಸೋಂಕಿತ ವ್ಯಕ್ತಿಗೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಇದೆ ಎಂದು ದೃಢಪಟ್ಟಿದೆ.
ಇದನ್ನೂ ಓದಿ : ಬೈಕ್ ಗಳ ನಡುವೆ ಅಪಘಾತ : ರಾಷ್ಟ್ರೀಯ ಖೋ-ಖೋ ಆಟಗಾರ ಸಾವು, ಇನ್ನೋರ್ವ ಗಂಭೀರ
ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿದೆಯಾದರೂ ಸದ್ಯ ಪತ್ತೆಯಾಗಿರುವ ಕೋವಿಡ್ ಸೋಂಕಿನ ರೂಪಾಂತರಿಯಿಂದಾಗಿ ಆತಂಕ ಸೃಷ್ಟಿ ಮಾಡಿದೆ.
ಕೋವಿಡ್ ರೂಪಾಂತರಿ ಸೋಂಕು ತಪಾಸಣೆಗಾಗಿ ಗೋವಾದಲ್ಲಿ ಸೋಂಕಿತರ ನಮೂನೆ ಸಂಗ್ರಹಿಸಿ ಪುಣೆಯ ಲ್ಯಾಬ್ ಗೆ ಕಳುಹಿಸಿ ಅಲ್ಲಿಂದ ತಪಾಸಣಾ ವರದಿ ಬರಲು ಹೆಚ್ಚಿನ ಸಮಯ ಹಿಡಿಯುತ್ತದೆ. ಅಷ್ಟು ದಿನಗಳಲ್ಲಿ ಸೋಂಕಿತ ವ್ಯಕ್ತಿಯಿಂದ ಸೋಂಕು ಬೇರೆಯವರಿಗೆ ಹರಡುವ ಸಾಧ್ಯತೆಯಿರುತ್ತದೆ. ಗೋವಾದಲ್ಲಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತ ವ್ಯಕ್ತಿ ಹಲವರಿಗೆ ಹರಡಿರುವ ಆತಂಕ ಎದುರಾಗಿದೆ.
ಇದನ್ನೂ ಓದಿ : ಸೌದಿ ಅರೇಬಿಯಾ ವಿ.ನಿಲ್ದಾಣದಲ್ಲಿ ಡ್ರೋನ್ ದಾಳಿ: ಎಂಟು ಮಂದಿಗೆ ಗಾಯ, ವಿಮಾನಗಳಿಗೆ ಹಾನಿ