Advertisement
ಈ ಚಂಡಮಾರುತಕ್ಕೆ ಯೆಮೆನ್ ದೇಶದ ಸೂಚನೆಯಂತೆ “ಮೋಚಾ” ಎಂದು ಹೆಸರಿಡಲಾಗಿದೆ. ಚಂಡಮಾರುತವು ಉತ್ತರಾಭಿಮುಖವಾಗಿ ಕೇಂದ್ರ ಬಂಗಾಲ ಕೊಲ್ಲಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಲಕೊಲ್ಲಿಯಲ್ಲಿ ಈ ಚಂಡಮಾರುತ ಉಂಟಾಗಲಿರುವುದರಿಂದ ಪಶ್ಚಿಮ ಕರಾವಳಿ ಮತ್ತು ಒಳನಾಡಿನಲ್ಲಿ ಬೇಸಗೆ ಮಳೆಯನ್ನು ಸುರಿಸುವ ಮೋಡಗಳನ್ನು ತನ್ನತ್ತ ಸೆಳೆಯುವ ಸಾಧ್ಯತೆ ಇದೆ. ಇದು ಮೇ ತಿಂಗಳಿನಲ್ಲಿ ಪಶ್ಚಿಮ ಕರಾವಳಿಯಲ್ಲಿ ಮಳೆ ಸುರಿಯುವುದಕ್ಕೆ ಅಡ್ಡಿಯಾಗಬಹುದು. ಉಡುಪಿ, ದಕ್ಷಿಣ ಕನ್ನಡ ಸಹಿತ ಪಶ್ಚಿಮ ಕರಾವಳಿ ಮತ್ತು ಒಳನಾಡಿನಲ್ಲಿ ಈ ವರ್ಷ ಇದುವರೆಗೆ ನಿರೀಕ್ಷಿಸಿದಷ್ಟು ಬೇಸಗೆ ಮಳೆ ಆಗಿಲ್ಲ. ಚಂಡಮಾರುತದಿಂದಾಗಿ ಇದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.