ಹೊಸದಿಲ್ಲಿ:ಮುಂಬಯಿ ಅಹ್ಮಾದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗಾಗಿ ದೇಶದಲ್ಲೇ ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್(ನಿಲುಭಾರವಿಲ್ಲದ ರೈಲು ಹಳಿ) ನಿರ್ಮಿಸಲಾಗುತ್ತಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.”ಈ ರೈಲು ಹಳಿಯಲ್ಲಿ ಪ್ರತೀ ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ಚಲಿಸ ಬಹುದು. ಈ ಯೋಜನೆ ಯಡಿ ಮುಂಬಯಿ ಮತ್ತು ಅಹ್ಮದಾಬಾದ್ ನಡುವಿನ 508 ಕಿ.ಮೀ. ಉದ್ದದ ಮಾರ್ಗದ ಪೈಕಿ 153 ಕಿ.ಮೀ.ಗಳಷ್ಟು ವಯಡಕ್ಟ್ (ಸೇತುವೆ ಮಾರ್ಗ) ಕಾಮಗಾರಿ ಪೂರ್ಣಗೊಂಡಿದೆ. 295.5 ಕಿ.ಮೀ.ಗಳಷ್ಟು ಟ್ರ್ಯಾಕ್ ಅಡಿಪಾಯದ ಸೀಲಿಂಗ್ ಕಾಮಗಾರಿ ಪೂರ್ಣ ಗೊಂಡಿದೆ. ಮೋದಿ 3.0 ಅವಧಿಯಲ್ಲಿ ಇನ್ನಷ್ಟು ಹೊಸ ತನಗಳು ಬರಲಿವೆ’ ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಜತೆಗೆ ದೇಶದ ಮೊದಲ ಬುಲೆಟ್ ರೈಲು ಕಾಮಗಾರಿಯ ಪ್ರಗತಿ ಕುರಿತ ವೀಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಏನಿದು ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್
ಜೆ ಸ್ಲಾéಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ವ್ಯವಸ್ಥೆಯು ಪ್ರಿ ಕ್ಯಾಸ್ಟ್ ಟ್ರ್ಯಾಕ್ ಅನ್ನು ಒಳಗೊಂಡಿರುತ್ತದೆ. ಇಲ್ಲಿ ಜೋಡಣೆ ಸಾಧನಗಳು ಮತ್ತು ಹಳಿಯನ್ನು ಜೋಡಿಸಲಾಗಿರುತ್ತದೆ.
ಜೆ ಸ್ಲಾéಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ವ್ಯವಸ್ಥೆಯು ಪ್ರಿ ಕ್ಯಾಸ್ಟ್ ಟ್ರ್ಯಾಕ್ ಅನ್ನು ಒಳಗೊಂಡಿರುತ್ತದೆ. ಇಲ್ಲಿ ಜೋಡಣೆ ಸಾಧನಗಳು ಮತ್ತು ಹಳಿಯನ್ನು ಜೋಡಿಸಲಾಗಿರುತ್ತದೆ.
Advertisement
ಈ ಸ್ಲ್ಯಾಬ್ ಅನ್ನು ಆರ್‌ಸಿ ಟ್ರ್ಯಾಕ್ ಬೆಡ್ ಮೇಲೆ ಇರಿಸಲಾಗುತ್ತದೆ. ಇದು ಸುಮಾರು 300 ಎಂಎಂ ದಪ್ಪ ಇರಲಿದೆ. ವಯಡಕ್ಟ್ ಟಾಪ್‌ಗ್ಳಲ್ಲಿ ಪ್ರತ್ಯೇಕ ಅಪ್ ಮತ್ತು ಡೌನ್ ಟ್ರ್ಯಾಕ್ ಲೈನ್‌ಗಳಿಗಾಗಿ ನಿರ್ಮಿಸಲಾಗುತ್ತದೆ.