Advertisement

ಅಪನಗದೀಕರಣದ ಬಳಿಕ ದೊಡ್ಡ ಚುನಾವಣೆ; ವೆಚ್ಚಕ್ಕೆ ಮಿತಿ,ನಿರ್ಬಂಧಗಳು 

02:31 PM Jan 04, 2017 | |

ಹೊಸದಿಲ್ಲಿ: ನೋಟು ಅಪನಗದೀಕರಣದ ಬಳಿಕ  ಇದೇ ಮೊದಲ ಬಾರಿಗೆ ದೇಶ ದೊಡ್ಡ ಮಟ್ಟದ ಚುನಾವಣೆಗಳನ್ನು ಎದುರುನೋಡುತ್ತಿದೆ. ಪಂಚರಾಜ್ಯಗಳ ವಿಧಾನಸಭಾ ಮತದಾನಕ್ಕೆ ಚುನಾವಣಾ ಆಯೋಗ ಬುಧವಾರ ದಿನಾಂಕಗಳನ್ನು ಪ್ರಕಟಿಸಿದ್ದು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣು ಇಡಲು ಮುಂದಾಗಿದೆ.ಇದಕ್ಕಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. 

Advertisement

ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಸುದ್ದಿಗೋಷ್ಠಿ ನಡೆಸಿ ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿದ್ದು,ಅಭ್ಯರ್ಥಿಗಳಿಗೆ ಕೆಲ ನಿರ್ಬಂಧಗಳನ್ನು ವಿಧಿಸಿದ್ದಾರೆ. ಉತ್ತರಪ್ರದೇಶ,ಪಂಜಾಬ್‌ ಮತ್ತು ಗೋವಾದಲ್ಲಿ  ಪ್ರತಿ ಅಭ್ಯರ್ಥಿಗೆ ಚುನಾವಣಾ ವೆಚ್ಚದ ಗರಿಷ್ಠ ಮಿತಿ 28 ಲಕ್ಷ ರೂಪಾಯಿ ಇಡಲಾಗಿದ್ದು, ಗೋವಾ ಮತ್ತು ಮಣಿಪುರದಲ್ಲಿ 20 ಲಕ್ಷ ರೂಪಾಯಿ ಇಡಲಾಗಿದೆ. 

ಚುನಾವಣೆಗೆ ಸ್ಪಧಿಸುವ ಎಲ್ಲಾ ಅಭ್ಯರ್ಥಿಗಳು ಹೊಸದಾಗಿ ಬ್ಯಾಂಕ್‌ ಖಾತೆ ತೆರೆಯಲು ಷರತ್ತು ವಿಧಿಸಲಾಗಿದ್ದು, 20,000 ದಾಟುವ ಎಲ್ಲಾ  ವ್ಯವಹಾರವನ್ನು ಚೆಕ್‌ ಮೂಲಕವೇ ಮಾಡಲು ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ ಎಲ್ಲಾ ದೇಣಿಗೆಗಳನ್ನು ಚೆಕ್ ಮೂಲಕ ಪಡೆಯಲು ಅವಕಾಶ ನೀಡಿದೆ. 

ಫೆಬ್ರವರಿ 4 ರಿಂದ ಮಾರ್ಚ್‌ 8 ರ ವೆರೆಗೆ ಚುನಾವಣೆಗಳು ನಡೆಯಲಿದ್ದು ಮಾರ್ಚ್‌ 11 ರಂದು ಎಲ್ಲಾ ರಾಜ್ಯಗಳ ಫ‌ಲಿತಾಂಶ ಒಟ್ಟಿಗೆ ಪ್ರಕಟವಾಗಲಿದೆ. ಇಂದಿನಿಂದಲೇ ಐದೂ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಾಗಿದೆ.

403 ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶ ದಲ್ಲಿ 7 ಹಂತಗಳಲ್ಲಿ, 60 ವಿಧಾನಸಭಾ ಕ್ಷೇತ್ರಗಳಿರುವ ಮಣಿಪುರ ದಲ್ಲಿ 2 ಹಂತದಲ್ಲಿ,  117 ವಿಧಾನಸಭಾ ಕ್ಷೇತ್ರಗಳಿರುವ ಪಂಜಾಬ್‌, 70  ವಿಧಾನಸಭಾ ಕ್ಷೇತ್ರಗಳಿರುವ ಉತ್ತರಾಖಂಡ ಮತ್ತು 40 ವಿಧಾನಸಭಾ ಕ್ಷೇತ್ರಗಳಿರುವ  ಗೋವಾ ವಿಧಾನಸಭೆಗೆ 1 ಹಂತದಲ್ಲಿ ಮತದಾನ ನಡೆಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next