Advertisement

ಜಲಮಂಡಳಿ ಎಂಜಿನಿಯರ್‌ಗಳ ವಿರುದ್ಧ ಎಫ್ಐಆರ್‌ ದಾಖಲು

12:38 AM Jan 26, 2020 | Team Udayavani |

ಬೆಂಗಳೂರು: ಚುಂಚಘಟ್ಟ ಕೆರೆಗೆ ಹೊಲಸು ನೀರು ಹರಿ ಬಿಟ್ಟಿರುವ ಆರೋಪದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಬ್ಬರು ಎಂಜಿನಿಯರ್‌ಗಳ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

“ಚುಂಚಘಟ್ಟ ಕೆರೆ ಸೇರುತ್ತಿದೆ ಹೊಲಸು’ ಎಂಬ ಶೀರ್ಷಿಕೆ ಅಡಿಯಲ್ಲಿ ಉದಯವಾಣಿ ಜ.24ರಂದು ವಿಶೇಷ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಬಿಬಿಎಂಪಿ ಕೆರೆ ವಿಭಾಗದ ಎಇಇ ಲಿಂಗೇಗೌಡ ದೂರು ಕೊಟ್ಟಿದ್ದು, ಈ ಸಂಬಂಧ ಬಿಡಬ್ಲೂಎಸ್‌ಎಸ್‌ಬಿ ದಕ್ಷಿಣ ವಿಭಾಗದ ಎಂಜಿನಿಯರ್‌ಗಳಾದ ರಾಘವೇಂದ್ರ ಹಾಗೂ ರಮೇಶ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕುಮಾರಸ್ವಾಮಿ ಲೇಔಟ್‌ ಸಮೀಪ 22 ಎಕರೆ ಚುಂಚಘಟ್ಟ ಕೆರೆ ಇದ್ದು, ಬಿಬಿಎಂಪಿಯ ಕೆರೆ ವಿಭಾಗದವರು 2018-19ನೇ ಸಾಲಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಚುಂಚಘಟ್ಟ ಕೆರೆ ಅಭಿವೃದ್ಧಿಪಡಿಸಲಾಗಿತ್ತು. ಕೆರೆಯಲ್ಲಿ ಶುದ್ಧಗೊಳಿಸಿ ಮಳೆ ನೀರು ಸಂಗ್ರಹಿಸಿದ್ದರು. ಕಳೆದ 15 ದಿನದಿಂದ ಬಿಡಬ್ಲೂéಎಸ್‌ಎಸ್‌ಬಿ ಅಧಿಕಾರಿಗಳು ಕೆರೆಗೆ ಕೊಳಚೆ ನೀರು ಹರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಸ್ಥಳೀಯರಿಂದ ದೂರು ಕೇಳಿ ಬಂದ ಹಿನ್ನೆಲೆ ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕೆರೆಗೆ ಹರಿದು ಬರುತ್ತಿರುವ ಕೊಳೆಚೆ ನೀರು ತಡೆಯುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೂ ಎಚ್ಚೆತ್ತುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next