Advertisement

2ನೇ ತರಗತಿ ವಿದ್ಯಾರ್ಥಿಗಳ ಹೊಡೆದಾಟ ಸಾವಿನಲ್ಲಿ ಅಂತ್ಯ: ಪೊಲೀಸರಿಂದ ವಿಚಾರಣೆ

07:36 PM Dec 13, 2022 | Team Udayavani |

ಫಿರೋಜಾಬಾದ್‌: ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯ ಕಿಶನ್‌ಪುರ್‌ ಎಂಬಲ್ಲಿ 2ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳ ನಡುವಿನ ಹೊಡೆದಾಟದಲ್ಲಿ ಒಬ್ಟಾತ ಅಸುನೀಗಿದ್ದಾನೆ.

Advertisement

ಶಿವಮ್‌ ಎಂಬ ವಿದ್ಯಾರ್ಥಿ ಹಾಗೂ ಇತರರ ನಡುವೆ ಗಲಾಟೆ ನಡೆದಿದೆ. ಅದು ಕೈಮೀರಿ ಹೋಗಿ, ಶಿವಮ್‌ ಎಂಬಾತನ ಎದೆಯ ಮೇಲೆ ಒಬ್ಬ ನೆಗೆದಿದ್ದಾನೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.

ಘಟನೆಗೆ ಸಂಬಂಧಿಸಿದೆ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಶಾಲೆಯ ಆಡಳಿತ ಮಂಡಳಿಯವರನ್ನೂ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: ವಿಜಯಪುರ: ಕೌಟುಂಬಿಕ ಕಲಹ; ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ತಾಯಿ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next