ಹೊಸದಿಲ್ಲಿ: ಪಂಜಾಬ್ ನ ಬಟಿಂಡಾದಲ್ಲಿರುವ ಸೇನಾ ಶಿಬಿರವೊಂದರಲ್ಲಿ ಯೋಧನೊಬ್ಬ ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ನಾಲ್ವರು ಯೋಧರು ಹುತಾತ್ಮರಾದ ಅದೇ ಸೇನಾ ನೆಲೆಯಲ್ಲಿ ನಿನ್ನೆ ನಡೆದ ಗುಂಡಿನ ದಾಳಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಸೇನೆ ಇಂದು ತಿಳಿಸಿದೆ.
20ರ ಹರೆಯದ ಯೋಧ ಆತ್ಮಹತ್ಯೆ ಮಾಡಿಕೊಂಡಿರುವಂತೆ ತೋರುತ್ತಿದೆ ಎಂದು ಸೇನೆ ಹೇಳಿದೆ. ಅವರು ಬಟಿಂಡಾ ಮಿಲಿಟರಿ ನೆಲೆಯಲ್ಲಿರುವ ಮತ್ತೊಂದು ಘಟಕದ ಭಾಗವಾಗಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ.
“ಬಟಿಂಡಾ ಮಿಲಿಟರಿ ಶಿಬಿರದಲ್ಲಿ 12 ಏಪ್ರಿಲ್ ರಂದು ಸುಮಾರು ಸಂಜೆ 4:30ಕ್ಕೆ ಒಬ್ಬ ಯೋಧ ಗುಂಡಿನ ಗಾಯದಿಂದ ಸಾವನ್ನಪ್ಪಿದರು. ಆ ಸೈನಿಕ ತನ್ನ ಸೇವಾ ಬಂದೂಕಿನೊಂದಿಗೆ ಸೆಂಟ್ರಿ ಡ್ಯೂಟಿಯಲ್ಲಿದ್ದನು. ಅದೇ ಬಂಧೂಕು ಮತ್ತು ಕಾರ್ಟ್ರಿಡ್ಜ್ ಕೇಸ್ ಸೈನಿಕನ ಪಕ್ಕದಲ್ಲಿ ಕಂಡುಬಂದಿದೆ. ಅವರನ್ನು ತಕ್ಷಣವೇ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅವರ ಸಾವನ್ನಪ್ಪಿದ್ದರು” ಎಂದು ಹೇಳಿಕೆ ತಿಳಿಸಿದೆ.
ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ಬೊಮ್ಮಾಯಿ ದಂಪತಿ
“ಮೃತ ಸೈನಿಕನು ಏಪ್ರಿಲ್ 11ರಂದು ರಜೆಯಿಂದ ಹಿಂದಿರುಗಿದ್ದ. ಪ್ರಕರಣವು ಆತ್ಮಹತ್ಯೆಗೆ ಯತ್ನಿಸಿದಂತಿದೆ. ಬಟಿಂಡಾ ಮಿಲಿಟರಿ ನೆಲೆಯಲ್ಲಿ ಮುಂಜಾನೆ 04:30 ಕ್ಕೆ ನಡೆದ ಘಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ”ಎಂದು ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಸೇನಾ ನೆಲೆದಲ್ಲಿ ಸಾವನ್ನಪ್ಪಿದ ಐದನೇ ಯೋಧ. ಬುಧವಾರ ಬೆಳಗ್ಗೆ ಸೇನಾ ಶಿಬಿರದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಫಿರಂಗಿ ಘಟಕದ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಸಂಭವಿಸಿದಾಗ ಸೈನಿಕರು ನಿದ್ರಿಸುತ್ತಿದ್ದರು.