Advertisement

ಮಳೆಗಾಲದ ತುರ್ತುಸ್ಥಿತಿಗೆ ಅಗ್ನಿಶಾಮಕದಳ ಸನ್ನದ್ಧ

06:00 AM Jun 10, 2018 | |

ಉಡುಪಿ:  ಮಳೆಗಾಲದಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ಅನಾಹುತಗಳಿಂದ ಸಾರ್ವಜನಿಕರನ್ನು ಪಾರು ಮಾಡಲು ಅಗ್ನಿಶಾಮಕ ದಳ ಇದೀಗ ವಿಶೇಷ ಸಲಕರಣೆ ಮತ್ತು ಸಿಬಂದಿಯೊಂದಿಗೆ ಸನ್ನದ್ಧಗೊಂಡಿದೆ.  

Advertisement

ಇನ್‌ಫ್ಲೇಟೇಬಲ್‌ ಬೋಟ್‌/ಒಬಿಎಂ
ಸಮುದ್ರದ ನೀರಿನ ಮಟ್ಟ ಹೆಚ್ಚಿ ಅಪಾಯ ಎದುರಾದಾಗ ಸಾರ್ವಜನಿಕರ ರಕ್ಷಣೆಗೆ ಇನ್‌ಫ್ಲೇಟೇಬಲ್‌ ಬೋಟ್‌ ಬಳಸಲಾಗುತ್ತದೆ. ಇದು 10 ಮಂದಿಯನ್ನು ಹೊತ್ತೂಯ್ಯಬಲ್ಲ ಬೋಟ್‌ ಆಗಿದೆ. ಉಡುಪಿಯಲ್ಲಿ ಇಂತಹ 2 ಬೋಟ್‌ಗಳಿವೆ. ಇದರೊಂದಿಗೆ 2 ಒಬಿಎಂ (ಔಟ್‌ ಬೋಟ್‌ ಮೆಷಿನ್‌) ಗಳಿವೆ. ಬೋಟ್‌ಗಳಿಗೆ ಈ ಮೆಷಿನ್‌ ಜೋಡಿಸಿ ಕಾರ್ಯಾಚರಣೆ ನಡೆಸಬಹುದು ಅಥವಾ ಮೆಷಿನ್‌ ಜೋಡಿಸದೆಯೂ ಕಾರ್ಯಾಚರಣೆ ಮಾಡ ಲಾಗುತ್ತದೆ.  ಹುಟ್ಟಿನ ಸಹಾಯದಿಂದ ಸಾರ್ವಜನಿಕರ ರಕ್ಷಣೆಗೆ ತೆರಳಲು ಈ ಬೋಟ್‌ ಸಹಕಾರಿಯಾಗುತ್ತದೆ.

ಪೋರ್ಟೆಬಲ್‌ ಪಂಪ್‌
ಇದನ್ನು ಮನೆ, ಕಚೇರಿ, ಆಸ್ಪತ್ರೆ ಇತ್ಯಾದಿ ಕಟ್ಟಡಗಳಿಗೆ ನೆರೆ ನೀರು ನುಗ್ಗಿ ಅಪಾಯ ಸಂಭವಿಸಬಹುದಾದ ಸಂದರ್ಭ ಬಳಸಲಾಗುತ್ತದೆ. ಇದರ ಸಹಾಯದಿಂದ ಕಟ್ಟಡದಲ್ಲಿ ತುಂಬಿಕೊಂಡ ನೀರನ್ನು ಹೊರಹಾಕಿ, ನೀರಿನಲ್ಲಿ ಸಿಲುಕಿಕೊಂಡ ಜನರನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಇದು ಉಡುಪಿ – 2, ಕಾರ್ಕಳ – 2, ಕುಂದಾಪುರ 1, ಮಲ್ಪೆಯಲ್ಲಿ 1 ಇದೆ. 

ಲೈಫ್ ಜಾಕೆಟ್‌
ಜನರು ನೀರಿನಲ್ಲಿ ಸಿಕ್ಕಿ ಮುಳುಗುತ್ತಿರುವ ಸಂದರ್ಭ ಅಂತಹವರಿಗೆ ಈ ಜಾಕೆಟ್‌ ಅನ್ನು ಒದಗಿಸಿದಾಗ ಆತ ನೀರಿನಲ್ಲಿ ಮುಳುಗುವುದಿಲ್ಲ. ಅನಂತರ ಅವರನ್ನು ನೀರಿನಿಂದ ಮೇಲೆಕ್ಕೆತ್ತಲು ಅನುಕೂಲವಾಗುತ್ತದೆ. ಇದು ಇಲಾಖೆಯ ಸಿಬಂದಿ ಮತ್ತು ಸಾರ್ವಜನಿಕರ ರಕ್ಷಣೆಗಾಗಿ ಬಳಸಲಾಗುತ್ತಿದ್ದು, ಜಿಲ್ಲೆಯ 4 ಠಾಣೆಗಳಲ್ಲಿ ಒಟ್ಟು 150 ಲೈಫ್ ಜಾಕೆಟ್‌ಗಳಿವೆ. 

ಲೈಫ್ ಬಾಯ್‌/ಆಸ್ಕಾ ಲೈಟ್‌/ರೋಪ್‌
ಜಿಲ್ಲೆಯ 4 ಠಾಣೆಗಳಲ್ಲಿ ಒಟ್ಟು 50 ಲೈಫ್ ಬಾಯ್‌ಗಳಿವೆ. ಇದನ್ನು ವ್ಯಕ್ತಿ ಮುಳುಗುತ್ತಿರುವ ಸಂದರ್ಭ ಆತನಿಗೆ   ನೀಡಿದಾಗ, ಆತ ಇದರ ಸಹಾಯದಿಂದ ಮುಳುಗುವುದನ್ನು ತಪ್ಪಿಸಬಹುದಾಗಿದೆ. ಆಸ್ಕಾ ಲೈಟ್‌ ಹಾಕಿದಾಗ ಸುಮಾರು 100 ಅಡಿ ಸುತ್ತಮುತ್ತಲೂ ಬೆಳಕು ಹರಡಿಕೊಳ್ಳುತ್ತದೆ. ಇದು ರಾತ್ರಿ ವೇಳೆಯ ತುರ್ತು ಕಾರ್ಯಾಚರಣೆಗೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 7 ಲೈಟ್‌ಗಳಿದ್ದು, ಉಡುಪಿ – 2, ಮಲ್ಪೆ – 1, ಕಾರ್ಕಳ – 2, ಕುಂದಾಪುರದಲ್ಲಿ 2 ಲೈಟ್‌ಗಳಿವೆ.

Advertisement

ನೆರೆ, ಪ್ರವಾಹದಂತಹ ಸಂದರ್ಭ ಸಿಕ್ಕಿ ಹಾಕಿಕೊಂಡ ಜನರನ್ನು ದಡ ಸೇರಿಸಲು, ಬೃಹದಾಕಾರದ ಮರ ಬಿದ್ದು ಅನಾಹುತ ಸಂಭವಿಸಿದಾಗ ಮತ್ತು ಬಾವಿಗೆ ಬಿದ್ದಾಗ ರೋಪ್‌ ಅನ್ನು ಬಳಸಲಾಗುತ್ತದೆ. ನೈಲಾನ್‌ ರೋಪ್‌, ಮನಿಲಾ (ತೆಂಗಿನ ನಾರು) ರೋಪ್‌ಗ್ಳು 4 ಠಾಣೆ ಗಳಲ್ಲಿಯೂ ತುರ್ತು ಸೇವೆಗೆ ಬೇಕಾಗುವಷ್ಟು ಇವೆ.

ತುರ್ತು ಸೇವೆಗೆ ಪರಿಕರಗಳು
ಈ ವರ್ಷ ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪ ನಿಧಿಯಿಂದ ಮರ ಬಿದ್ದು ಸಂಕಷ್ಟಕ್ಕೀಡಾದಾಗ ಜನರ ರಕ್ಷಣೆಗಾಗಿ ಮರವನ್ನು ಕತ್ತರಿಸಲು ಅನುಕೂಲವಾಗುವ 6 ಪೆಟ್ರೋಲ್‌ ಡ್ರಿವನ್‌ ಚೈನ್ಸಾ, ಮಳೆಯಲ್ಲಿ ಕಾರ್ಯಾಚರಣೆಗಾಗಿ 50 ರೈನ್‌ಕೋಟ್‌ಗಳು, 4 ಬಂಡಲ್‌ (ಸುಮಾರು 220 ಅಡಿ ಉದ್ದ) ನೈಲಾನ್‌ ರೋಪ್‌, 10 ರಿಚಾಜೇìಬಲ್‌ ಟಾರ್ಚ್‌ಗಳು, 40 ಲೆದರ್‌ ಹ್ಯಾಂಡ್‌ ಗ್ಲೌಸ್‌, 4 ಎಲೆಕ್ಟ್ರಿಕಲ್‌ ರೆಸಿಸ್ಟೆನ್ಸ್‌ ರಬ್ಬರ್‌ ಗ್ಲೌಸ್‌ ಇಲಾಖೆೆಗೆ ನೀಡಲಾಗಿದೆ. ಈ ಪರಿಕರಗಳನ್ನು 4 ಠಾಣೆಗಳಿಗೆ ಹಂಚಲಾಗುವುದು.

ಎಎಲ್‌ಎಫ್ ವಾಹನ ಲಭ್ಯ
ಎಎಲ್‌ಫಿ (ಏರಿಯಲ್‌ ಲ್ಯಾಡರ್‌ ಪ್ಲ್ರಾಟ್‌ಪಾರ್ಮ್) ಅತ್ಯಾಧುನಿಕ ವಾಹನವು ಮಂಗಳೂರಿನಲ್ಲಿದೆ. ಬಹುಮಹಡಿ ಕಟ್ಟಡದಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಲು ಇದನ್ನು ಬಳಸಲಾಗುತ್ತದೆ. ತುರ್ತು ಸಂದರ್ಭಕ್ಕೆ ಈ ವಾಹನವನ್ನು ಮಂಗಳೂರಿನಿಂದ ಉಡುಪಿ ಜಿಲ್ಲೆಗೆ ಬಳಸಿಕೊಳ್ಳಲು ಅವಕಾಶವಿದೆ.

ಎಎಲ್‌ಫಿ (ಏರಿಯಲ್‌ ಲ್ಯಾಡರ್‌ ಪ್ಲ್ರಾಟ್‌ಪಾರ್ಮ್) ಅತ್ಯಾಧುನಿಕ ವಾಹನವು ಮಂಗಳೂರಿನಲ್ಲಿದೆ. ಬಹುಮಹಡಿ ಕಟ್ಟಡದಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಲು ಇದನ್ನು ಬಳಸಲಾಗುತ್ತದೆ. ತುರ್ತು ಸಂದರ್ಭಕ್ಕೆ ಈ ವಾಹನವನ್ನು ಮಂಗಳೂರಿನಿಂದ ಉಡುಪಿ ಜಿಲ್ಲೆಗೆ ಬಳಸಿಕೊಳ್ಳಲು ಅವಕಾಶವಿದೆ.

ನಾಲ್ಕು ಠಾಣೆಗಳು
ಜಿಲ್ಲೆಯಲ್ಲಿ ಉಡುಪಿ, ಮಲ್ಪೆ, ಕುಂದಾಪುರ, ಕಾರ್ಕಳ ಹೀಗೆ 4 ಠಾಣೆಗಳು ಕಾರ್ಯಾಚರಿಸುತ್ತಿವೆ. ಇನ್ನುಳಿದಂತೆ ಬೈಂದೂರು, ಕಾಪು, ಬ್ರಹ್ಮಾವರ, ಮಣಿಪಾಲದಲ್ಲಿ ಠಾಣೆಗಳನ್ನು ಸ್ಥಾಪಿಸಲು ಸರಕಾರದಿಂದ ಮಂಜೂರಾತಿ ಹಂತದಲ್ಲಿದೆ.

ಸೇವೆಗೆ ಸದಾ ಸನ್ನದ್ಧ
ಹಗಲಿರುಳೆನ್ನದೆ ಯಾವುದೇ ಕಾಲದಲ್ಲಿ ಕರೆ ಬಂದಾಗ ಅನಾಹುತ ನಡೆದ ಪ್ರದೇಶಕ್ಕೆ ತೆರಳಲು ಸದಾ ಸನ್ನದ್ಧರಾಗಿಯೇ ಇರುತ್ತೇವೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಕೆಲಸದ ಪಾಳಿ ಬದಲಾಗುವ ಸಂದರ್ಭ ಪ್ರತಿಯೊಬ್ಬ ಸಿಬಂದಿಯೂ ಚಾರ್ಜ್‌ ತೆಗೆದುಕೊಳ್ಳುವಾಗ ಅವಶ್ಯ ಪರಿಕರಗಳು, ಯಂತ್ರವನ್ನೊಮ್ಮೆ ಚಾಲನೆ ಮಾಡಿ ಪರಿಶೀಲನೆ ನಡೆಸಿ ಸಿದ್ಧರಾಗುತ್ತಾರೆ.   ತುರ್ತು ಸಂದರ್ಭ ಪರಿಸ್ಥಿತಿಗೆ ಅನುಗುಣವಾಗಿ ಪಕ್ಕದ ಜಿಲ್ಲೆ/ತಾಲೂಕಿನಿಂದ ಅವಶ್ಯ ವಾಹನ/ಸಿಬಂದಿಗಳನ್ನು ಕರೆಸಿ ರಕ್ಷಣೆ ಕಾರ್ಯ ಮಾಡಲಿದ್ದೇವೆ. ಜಿಲ್ಲೆಯ 4 ಠಾಣೆಗಳಲ್ಲಿ ಅಧಿಕಾರಿಗಳು ಸೇರಿದಂತೆ ಒಟ್ಟು 80 ಮಂದಿ ಸಿಬಂದಿ ಸೇವೆಯಲ್ಲಿದ್ದಾರೆ. ನಮ್ಮೊಂದಿಗೆ ಸಾರ್ವಜನಿಕರ ಸಹಕಾರದ ಅಗತ್ಯವೂ ಇದೆ.
– ವಸಂತ್‌ ಕುಮಾರ್‌ ಎಚ್‌.ಎಂ., 
ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಉಡುಪಿ

101ಕ್ಕೆ ಕರೆ ಮಾಡಿ
ತುರ್ತು ಸಂದರ್ಭ 101ಕ್ಕೆ ಕರೆ ಮಾಡಿದರೆ ಬೆಂಗಳೂರು ಅಗ್ನಿಶಾಮಕ ಕೇಂದ್ರಕ್ಕೆ ಹೋಗುತ್ತದೆ ಎನ್ನುವ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. 101ಕ್ಕೆ ಕರೆ ಮಾಡಿದಾಗ ಬೆಂಗಳೂರಿಗೆ ಹೋದರೆ ಅಲ್ಲಿನವರಲ್ಲಿ ಯಾವ ಜಿಲ್ಲೆಯಿಂದ? ಯಾವ ಭಾಗಕ್ಕೆ ತುರ್ತು ಸೇವೆ ಅಗತ್ಯವಿದೆ ಎಂದು ಸ್ಪಷ್ಟವಾಗಿ ತಿಳಿಸಿದರೆ ಅಲ್ಲಿಂದ ಸಂಬಂಧಪಟ್ಟ ಜಿಲ್ಲೆ/ತಾಲೂಕಿನ ಠಾಣೆಗೆ ಮಾಹಿತಿ ರವಾನಿಸುತ್ತಾರೆ. ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ/ಮೊಬೈಲ್‌ ನಿಂದ 101ಕ್ಕೆ ಮಾಡಿದರೆ ಉಡುಪಿಗೆ ಬರುತ್ತದೆ. ಏರ್‌ಟೆಲ್‌ ಸೇರಿದಂತೆ ಇನ್ನುಳಿದ ನೆಟ್‌ವರ್ಕ್‌ ಸರ್ವಿಸ್‌ನಿಂದ ಕರೆ ಮಾಡಿದರೆ ಬೆಂಗಳೂರು ಕೇಂದ್ರ ಕಚೇರಿಗೆ ಹೋಗುವ ಸಾಧ್ಯತೆ ಜಾಸ್ತಿಯಿದೆ. ಉಡುಪಿ ಠಾಣೆಗೆ 0820-2520333/101 ಅನ್ನು ಸದಾ ಕಾಲ ಸಂಪರ್ಕಿಸಬಹುದು.

– ಎಸ್‌.ಜಿ. ನಾಯ್ಕ 

Advertisement

Udayavani is now on Telegram. Click here to join our channel and stay updated with the latest news.

Next