Advertisement

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ

12:16 PM Jan 22, 2021 | Team Udayavani |

ನೆಲಮಂಗಲ: ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಮೈಲನಹಳ್ಳಿ ಸಮೀಪದ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಅಪಾಯ ತಪ್ಪಿದೆ. ನಗರಸಭೆ ಅಧಿಕಾರಿಗಳು ಹಸಿ- ಒಣ ಕಸವನ್ನು ವಿಂಗಡಣೆ ಮಾಡದೇ ಪ್ಲಾಸ್ಟಿಕ್‌ ಸೇರಿದಂತೆ ಅಪಾಯದ ವಸ್ತುಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುರಿಯು ತ್ತಿದ್ದು, ಇದರಿಂದ ವಿಂಗಡಣೆ ಮಾಡಲಾಗದೇ ತ್ಯಾಜ್ಯ ಸಂಗ್ರಹವಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಅಪಾಯದಿಂದ ಪಾರು: ವಿಶಾಲ ಪ್ರದೇಶದಲ್ಲಿ ಹೆಚ್ಚು ಪ್ಲಾಸ್ಟಿಕ್‌ ವಸ್ತುಗಳು ಇರುವುದರಿಂದ ಬೆಂಕಿ ಆವರಿಸುವ ಆತಂಕ ಎದುರಾಗಿತ್ತು. ಆದರೆ, ಸರಿ ಸಮಯಕ್ಕೆ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣ ಮಾಡಿ ಅಪಾಯದಿಂದ ಪಾರು ಮಾಡಿದ್ದು, ಘಟಕದಲ್ಲಿನ ಯಂತ್ರಗಳು ಹಾಗೂ ನೌಕರರ ಮನೆಗಳಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:ಅಬಕಾರಿ ಇಲಾಖೆಯಲ್ಲಿ ಮಾಡುವುದೇನಿದೆ?

ನಗರಸಭೆ ಯಡವಟ್ಟು: ಪುರಸಭೆಯಾಗಿದ್ದಾಗ ನಗರದ ತ್ಯಾಜ್ಯವನ್ನು ಸುರಿಯುತ್ತಿದ್ದ ಅಧಿಕಾರಿಗಳು, ಈಗ ನಗರಸಭೆ ವ್ಯಾಪ್ತಿಗೆ ವಿಸ್ತರಣೆ ಮಾಡಿದ್ದಾರೆ. ವಿಶಾಲ ಪ್ರದೇಶವಿದ್ದರು ಸರಿ ನಿರ್ವಹಣೆ ಮಾಡಿಲ್ಲ. ವಾಹನಗಳನ್ನು ತಂದು ಸುರಿಯುವ ಕೆಲಸ ಮಾಡುತ್ತಿದ್ದು, ಅವುಗಳನ್ನು ವಿಂಗಡಣೆ ಮಾಡಿ ಪುನರ್‌ ಬಳಕೆ ಹಾಗೂ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ವಿಲೇವಾರಿ ಘಟಕ ಅವ್ಯವಸ್ಥೆ ಗೂಡಾಗಿದ್ದು, ಅಧಿಕಾರಿಗಳ ಯಡವಟ್ಟಿಗೆ ಸಾಕ್ಷಿಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next