Advertisement
ಈ ಘಟಕದಲ್ಲಿ ಹಲವಾರು ಕಾರಣಗಳಿಂದಾಗಿ ಸಮರ್ಪಕವಾಗಿ ತ್ಯಾಜ್ಯವಿಲೇವಾರಿ ನಡೆಯದೆ ಸಮಸ್ಯೆ ನಿರ್ಮಾಣವಾಗಿರುವ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿದ ಆತಂಕ ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಕಟವಾಗುತ್ತಿದ್ದಂತೆ ಹೊಸದಾಗಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಪ್ರಸಾದ್ ಕುಮಾರ್ ತಮ್ಮ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಒಂದು ತಿಂಗಳ ಒಳಗಾಗಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದರು. ಇದಾದ ಬಳಿಕ ತ್ಯಾಜ್ಯ ವಸ್ತುಗಳಿರುವಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ತ ತ್‌ಕ್ಷಣವೇ ನಂದಿಸಲಾಯಿತು. ಆದರೆ ತ್ಯಾಜ್ಯದೆಡೆಯಿಂದ ಹೊಗೆ ಹೊರಸೂಸುತ್ತಿರುವುದು ತಮ್ಮ ಆತಂಕಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಘಟಕದ ಜಾಗದಲ್ಲಿ ಯಂತ್ರೋಪಕರಣಗಳ ಮೂಲಕ ತ್ಯಾಜ್ಯದ ಮೇಲೆ ಮಣ್ಣು ಸುರಿದು ಸಮತಟ್ಟು ಮಾಡುವ ಕ್ರಿಯೆ ನಡೆದಿದೆ. ಗುಡ್ಡದೋಪಾದಿಯಲ್ಲಿ ಹರಡಿರುವ ತ್ಯಾಜ್ಯಬೆರೆತ ಮಣ್ಣು ಮಳೆಗಾಲದಲ್ಲಿ ಕೆಳಗೆ ಜಾರಿಕೊಂಡು ಹತ್ತಿರದ ತೋಟ, ಹೊಲಗಳಿಗೆ ನುಗ್ಗುವ ಅಪಾಯದ ಬಗ್ಗೆ ಸ್ಥಳೀಯರು ಪುರಸಭೆಗೆ ತಿಳಿಸಿದ್ದು ತಡೆಗೋಡೆ ನಿರ್ಮಾಣಗಾಗಿ ಆಗ್ರಹಿಸಿದ್ದರು. ಅಂತೆಯೇ ಪುರಸಭೆಯ ವತಿಯಿಂದ ಇಲ್ಲಿ ಪ್ರಾಥಮಿಕವಾಗಿ ತಡೆಗೋಡೆ ನಿರ್ಮಿಸಲು ಸುಮಾರು 25 ಲಕ್ಷ ರೂ. ವೆಚ್ಚದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದು ಸಾಲದು ಎಂಬ ಅರಿವಿದೆ. ಆದರೆ, ಸದ್ಯ ಸಣ್ಣ ಮಟ್ಟದಲ್ಲಾದರೂ ತಡೆಗೋಡೆ ನಿರ್ಮಾ ಣಕ್ಕೆ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮುಂದಿನ ವರ್ಷದಲ್ಲಿ ಇನ್ನಷ್ಟು ಸಂಪನ್ಮೂಲವನ್ನು ಹೊಂದಿಸಿ ತಡೆಗೋಡೆಯನ್ನು ವಿಸ್ತರಿಸಲು ಯೋಜಿಸಲಾಗಿದೆ’ ಎಂದು ಪುರಸಭಾಧ್ಯಕ್ಷ ಪ್ರಸಾದ್‌ಕುಮಾರ್ ತಿಳಿಸಿದ್ದಾರೆ.