Advertisement

ಆಗಸದಲ್ಲೇ ವಿಮಾನಕ್ಕೆ ಬೆಂಕಿ…241 ಜನರ ಪ್ರಾಣ ಕಾಪಾಡಿದ ಸಾಹಸಿ ಪೈಲಟ್

09:14 PM Feb 21, 2021 | Team Udayavani |

ವಾಷಿಂಗ್ಟನ್: ಆಗಸದಲ್ಲಿರುವಾಗಲೇ ಎಂಜಿನ್ ಫೇಲ್ ಆಗಿ ಬೆಂಕಿ ಹೊತ್ತಿಕೊಂಡು ಅಪಾಯಕ್ಕೆ ಸಿಲುಕಿದ್ದ ವಿಮಾನವನ್ನು ಸಾಹಸಿ ಪೈಲಟ್ ಸುರಕ್ಷಿತವಾಗಿ ಭೂಮಿಗಿಳಿಸಿ 241 ಜನರ ಪ್ರಾಣ ಕಾಪಾಡಿದ್ದಾನೆ.

Advertisement

ಅಮೆರಿಕದ ಡೆನ್ವರ್‌ನಿಂದ ಹೊನೊಲುಲುಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಎಂಜಿನ್ ನ ರಕ್ಷಣಾ ಕವಚ ಕೂಡ ಕಳಚಿ ಭೂಮಿಗೆ ಬಿದ್ದಿತು. ಇನ್ನೇನು  ಎಲ್ಲವೂ ಮುಗಿದು ಹೋಗಲಿದೆ ಎಂದು ಪ್ರಯಾಣಿಕರು ಆತಂಕದಲ್ಲಿರುವಾಗವೇ ಪೈಲಟ್ ಸಮಯಪ್ರಜ್ಞೆ ಮೆರೆದಿದ್ದಾನೆ. ಆಪತ್ತಿನ ಕುರಿತು ಏರ್ ಟ್ರಾಫಿಕ್ ಕಂಟೋಲ್ ರೂಂಗೆ ಮಾಹಿತಿ ನೀಡಿ, ವಿಮಾನವನ್ನು ಮರಳಿ ಡೆನ್ವರ್ ನಿಲ್ದಾಣದತ್ತ ತಿರುಗಿಸಿ, ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.

ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯ ವಿಡಿಯೋ ಮಾಡಿರುವ ಪ್ರಯಾಣಿಕ ಅದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ ವಿಮಾನದಲ್ಲಿ 231 ಜನ ಪ್ರಯಾಣಿಕರು ಹಾಗೂ 10 ಜನ ಸಿಬ್ಬಂದಿಗಳಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೈಲಟ್ ನ ಸಮಯಪಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ವಿಮಾನದಲ್ಲಿದ್ದ ಸಿಬ್ಬಂದಿ ಪೈಲಟ್ ನ ಸಾಹಸಕ್ಕೆ ಹಾಗೂ ಧೈರ್ಯಕ್ಕೆ ಸೆಲ್ಯೂಟ್ ಹೇಳಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next