Advertisement

ಕಾಶ್ಮೀರದಲ್ಲಿ ಗುಂಡಿನ ಕಾಳಗ;ಯೋಧರಿಬ್ಬರು ಹುತಾತ್ಮ,4 ಉಗ್ರರು ಫಿನಿಷ್‌

09:21 AM Feb 12, 2017 | Team Udayavani |

ಶ್ರೀನಗರ : ಕಾಶ್ಮೀರದ ಕುಲ್ಗಾಮಾದಾ ಯೂರಿಪೋರಾ ಸೆಕ್ಟರ್‌ನಲ್ಲಿ ಭಾನುವಾರ ಬೆಳಿಗ್ಗೆ  ನಡೆದ ಭಾರೀ ಗುಂಡಿನ ಕಾಳಗದಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಹಿಜ್ಬುಲ್‌ ಮುಜಾಯಿದ್ದೀನ್‌ ಸಂಘಟನೆಗೆ ಸೇರಿದ ಇಬ್ಬರು ಉಗ್ರ ರನ್ನು ಭದ್ರತಾ ಪಡೆಗಳು ಹತ್ಯೆ ಗೈದಿರುವ ಬಗ್ಗೆ ವರದಿಯಾಗಿದೆ. 

Advertisement

ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ಸೇನಾ ಪಡೆಗಳು ದಾಳಿ ನಡೆಸಿದ್ದು ,ಈ ವೇಳೆ ಭಾರೀ ಗುಂಡಿನ ಕಾಳಗ ನಡೆದಿರುವುದಾಗಿ ವರದಿಯಾಗಿದೆ. 

ಗುಂಡಿನ ಚಕಮಕಿಯ ವೇಳೆ ಇನ್ನೋರ್ವ  ಯೋಧನಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಬಗ್ಗೆ ವರದಿಯಾಗಿದೆ.

ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next