Advertisement

ಪಾಟ್ನಾ: ರೈಲಿನಲ್ಲಿ ಬೆಂಕಿ ಅವಘಡ; ಯಾವುದೇ ಪ್ರಾಣ ಹಾನಿ ಇಲ್ಲ

08:10 AM Jan 10, 2018 | Team Udayavani |

ಪಾಟ್ನಾ: ನಿಂತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಪಾಟ್ನಾ ಮೊಕಾಮಾ ನಡುವಿನ ಮೆಮು ರೈಲಿನಲ್ಲಿ ಬುಧವಾರ ತಡರಾತ್ರಿ ನಡೆದಿದೆ.

Advertisement

ಪಾಟ್ನಾ ಮೊಕಾಮಾ ರೈಲು ಮಂಗಳವಾರ ರಾತ್ರಿ 11ಗಂಟೆಗೆ ಮೊಕಾಮಾ ನಿಲ್ದಾಣಕ್ಕೆ ತಲುಪಿತ್ತು. ಬುಧವಾರ ತಡರಾತ್ರಿ 2 ಬೋಗಿಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲಿ ಮತ್ತೆರೆಡು ಬೋಗಿಗಳಿಗೆ ಬೆಂಕಿ ಆವರಿಸಿಕೊಂಡಿದೆ ಎಂದು ವರದಿಯಾಗಿದೆ.

ಸಮಯಕ್ಕೆ ಸರಿಯಾಗಿ ಬೆಂಕಿ ಆರಿಸಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಬೆಂಕಿ ಆಕಸ್ಮಿಕ್ಕೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next