Advertisement

ಜಕ್ಕೂರು ವಿಮಾನ ನಿಲ್ದಾಣದಲ್ಲಿ ಬೆಂಕಿ!

10:48 AM Mar 11, 2018 | |

ಬೆಂಗಳೂರು: ವಿಮಾನ ತರಬೇತಿ ಮತ್ತು ವಿವಿಐಪಿ ವಿಮಾನ ಲ್ಯಾಂಡ್‌ ಆಗುವ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಜೆ 4ಗಂಟೆಗೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ನಂದಿಸಿದ್ದಾರೆ. ಜಕ್ಕೂರು ರನ್‌ ವೇ ಸುತ್ತಲ ಪ್ರದೇಶದಲ್ಲಿ ಒಣಗಿದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ, ನಂತರ ಹೆಚ್ಚು ಸ್ಥಳವನ್ನು ವ್ಯಾಪಿಸಿದೆ. ಇದನ್ನು ಗಮನಿಸಿದ ಸಿಬ್ಬಂದಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಮೂರು ಅಗ್ನಿಶಾಮಕ ವಾಹನದಲ್ಲಿ ಬಂದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

Advertisement

ಯಾರೋ ಸಿಗರೇಟ್‌ ಸೇದಿ ಒಣ ಹುಲ್ಲಿಗೆ ಎಸೆದ ಪರಿಣಾಮ ಕಿಡಿ ಒಣ ಹುಲ್ಲಿಗೆ ತಾಗಿ ದೊಡ್ಡದಾಗಿ ವ್ಯಾಪಿಸಿದೆ ಎಂದು ಅಗ್ನಿಶಾಮಕದಳ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಜಕ್ಕೂರಿನಲ್ಲಿ ಯಾವುದೇ ವಿಮಾನಗಳ ಲ್ಯಾಂಡಿಂಗ್‌ಗೆ ಅವಕಾಶ ನೀಡಲಿಲ್ಲ. ವಿಐಪಿ ವಿಮಾನಗಳು ಎಚ್‌ಎಎಲ…, ಯಲಹಂಕ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯುವಂತೆ ವ್ಯವಸ್ಥೆ ಮಾಡಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next