Advertisement

ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ಕಂಪೆನಿ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ

09:11 AM Apr 12, 2020 | Hari Prasad |

ಮಂಗಳೂರು: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿನ ಮೂಗಾಂಬಿಕೈ ಕಾರ್ಖಾನೆಯ ಕಚ್ಛಾ ವಸ್ತುಗಳ ಸಂಗ್ರಹಾಗಾರದಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ. ಇದರಿಂದಾಗಿ ಅಪಾರ ಪ್ರಮಾಣದ ಕಚ್ಛಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

Advertisement

ಇದು ಹರಿಸೂದನಾ ಎಂಬವರಿಗೆ ಸಂಬಂಧಿಸಿದ ಮೆಟಲ್ ರಿಪೈನರೀಸ್ ಕಾರ್ಖಾನೆಯಾಗಿತ್ತು. ಬೆಂಕಿಯ ತೀವ್ರತೆ ಅಕ್ಕ ಪಕ್ಕದ ಕಂಪೆನಿಗಳ ಮಾಲಕರನ್ನೂ ಸಹ ಆತಂಕಕ್ಕೀಡುಮಾಡಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಕಾರ್ಖಾನೆಗೆ ರಜೆ ಘೋಷಣೆ ಮಾಡಲಾಗಿತ್ತು. ಹಾಗಾಗಿ ಕಾರ್ಮಿಕರು ಯಾರೂ ಕಂಪೆನಿಯಲ್ಲಿ ಇರಲಿಲ್ಲ. ಅದಿಲ್ಲವಾದರೆ ಬೆಂಕಿ ಅನಾಹುತಕ್ಕೆ ಪ್ರಾಣಹಾನಿ ಸಂಭವಿಸುವ ಅಪಾಯಗಳಿದ್ದವು.

ಘಟನಾ ಸ್ಥಳಕ್ಕೆ ಎರಡು ಅಗ್ನಿ ಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಪಣಂಬೂರು ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next