ಭೋಪಾಲ್: ಕೋವಿಡ್ 19 ಸೋಂಕಿನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ವಿರುದ್ಧ ಎಫ್ ಐಆರ್ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮೂರು ಲಕ್ಷ ದಾಟಿದ ಸಾವಿನ ಸಂಖ್ಯೆ: ದೇಶದಲ್ಲಿ 2.22 ಲಕ್ಷ ಹೊಸ ಸೋಂಕು ಪ್ರಕರಣಗಳು ಪತ್ತೆ
ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧ ಭಾನುವಾರ (ಮೇ 23) ಬಿಜೆಪಿ ಪ್ರತಿನಿಧಿಗಳ ಸಮಿತಿ ಈ ದೂರನ್ನು ದಾಖಲಿಸಿರುವುದಾಗಿ ವರದಿ ಹೇಳಿದೆ. ಕಮಲ್ ನಾಥ್ ವಿರುದ್ಧ ಯೋಗಿತಾ ಸಾತಂಕರ್ ಎಫ್ ಐಆರ್ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಮಲ್ ನಾಥ್ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಸೋಂಕು ಮತ್ತು ಅದರ ಹರಡುವಿಕೆ ಬಗ್ಗೆ ಸುಳ್ಳು ಎಚ್ಚರಿಕೆ ಸಂದೇಶ ನೀಡುವುದು ಈ ಕಾಯ್ದೆ ಪ್ರಕಾರ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 188 ಮತ್ತು 54ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಇಡೀ ಜಗತ್ತಿನಾದ್ಯಂತ ಹರಡುತ್ತಿರುವ ಕೋವಿಡ್ ಸೋಂಕು ಭಾರತದ ರೂಪಾಂತರಿ ವೈರಸ್ ಆಗಿದೆ ಎಂದು ಕಮಲ್ ನಾಥ್ ಅವರು ಶನಿವಾರ ಉಜ್ಜೈನ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಭೋಪಾಲ್ ಕ್ರೈ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.