Advertisement
ಪ್ರತಿಭಟನೆಯಲ್ಲಿ ಇರಲಿಲ್ಲ: ಪೊಲೀಸರ ಗುಂಡೇಟಿಗೆ ಬಲಿಯಾದ ಶಕೀಬ್ ಅನ್ಸಾರಿ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಅವರು ಕೆಲಸದ ಮೇಲೆ ರಾಂಚಿಗೆ ತೆರಳಿದ್ದಾಗ ಅನಪೇಕ್ಷಿತ ಘಟನೆ ನಡೆದಿದೆ ಎಂದು ಅವರ ಸಹೋದರ ಶಾಹಿಲ್ ತಿಳಿಸಿದ್ದಾರೆ.
Related Articles
ವಿವಾದಿತ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯಿಂದ ಉಚ್ಚಾಟಿತರಾಗಿರುವ ನವೀನ್ ಕುಮಾರ್ ಜಿಂದಾಲ್, ತಮ್ಮ ಕುಟುಂಬ ಆಪತ್ತಿನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ನನ್ನ ಕುಟುಂಬಕ್ಕೆ ಬೆದರಿಕೆ ಕರೆ ಬರುತ್ತಿದೆ. ನನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಯುವ ಆತಂಕ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಬೆದರಿಕೆ ಕರೆಗಳ ಸ್ಕ್ರೀನ್‌ಶಾಟ್‌ನೂ° ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ದಯವಿಟ್ಟು ಯಾರೂ ನನ್ನ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕವಾಗಿ ಹಂಚಬೇಡಿ. ನಾವು ಕೇಳಿಕೊಂಡರೂ ಕೆಲವರು ನನ್ನ ಮನೆಯ ವಿಳಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬ ಆಪತ್ತಿನಲ್ಲಿದೆ’ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ದಿಲ್ಲಿ ಪೊಲೀಸರಿಗೆ ಮನವಿಯನ್ನೂ ಮಾಡಿದ್ದಾರೆ.
Advertisement
ಭಾರತದ ಆಂತರಿಕ ವಿಚಾರ: ಬಾಂಗ್ಲಾದೇಶ“ಭಾರತದಲ್ಲಿ ಸದ್ಯ ನಡೆಯುತ್ತಿರುವುದು ಅಲ್ಲಿನ ಆಂತರಿಕ ವಿಚಾರ. ಈ ಬಗ್ಗೆ ನಾವೇಕೆ ತನಿಖೆ ನಡೆಸಿ, ಪ್ರಚೋದನೆ ನೀಡಬೇಕು?’ ಹೀಗೆಂದು ಪ್ರಶ್ನೆ ಮಾಡಿದ್ದು ಬಾಂಗ್ಲಾದೇಶ ವಾರ್ತಾ ಸಚಿವ ಹಸನ್ ಮಹಮೂದ್. ಢಾಕಾದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ನಮ್ಮ ದೇಶದ ಹೊರಗಿನ ವಿಚಾರ. ಅದಕ್ಕೆ ನಮ್ಮ ಸರಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್ ವಿರುದ್ಧ ನಿಂದನೆ ನಡೆಸಲಾಗಿದೆ. ಅದಕ್ಕೆ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ಖಂಡನೆ ವ್ಯಕ್ತಪಡಿಸಿದರೂ ಬಾಂಗ್ಲಾದೇಶವೇಕೆ ಮೌನ ವಹಿಸಿದೆ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ. ಅವಮಾನದ ಘಟನೆ ಬಗ್ಗೆ ನಾವು ಖಂಡನೆ ಮಾಡುತ್ತೇವೆ. ಆದರೆ ಭಾರತದಲ್ಲಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ಇಲ್ಲವೆಂದರು. ನೆದರ್ಲೆಂಡ್ ಸಂಸದರಿಗೆ ಬೆದರಿಕೆ
ಬಿಜೆಪಿಯ ಉಚ್ಚಾಟಿತ ನಾಯಕಿ ನೂಪುರ್ ಶರ್ಮಾಗೆ ಬೆಂಬಲ ನೀಡಿ ಹೇಳಿಕೆ ನೀಡಿದ್ದ ನೆದರ್ಲೆಂಡ್ ಸಂಸದ ಗ್ರೀಟ್ ವೈಲ್ಡರ್ಸ್‌ಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, “ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿ ಮಾತನಾಡಿದ್ದಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದಾಗಿ ಎದೆಗುಂದಿಲ್ಲ. ನೂಪುರ್ ಅವರಿಗೆ ಮತ್ತಷ್ಟು ಬೆಂಬಲ ನೀಡಲು ಧೈರ್ಯ ನೀಡಿದಂತಾಗಿದೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಕರೆಗಳ ಸ್ಕ್ರೀನ್ ಶಾಟ್‌ಗಳನ್ನೂ ಟ್ವೀಟ್ ಮಾಡಿದ್ದಾರೆ.