Advertisement

ಸಚಿವ ಖಾದರ್‌ ವಿರುದ್ಧ ಎಫ್ಐಆರ್‌

07:10 AM Mar 31, 2017 | |

ಚಾಮರಾಜನಗರ: ಸಚಿವ ಯು.ಟಿ.ಖಾದರ್‌ ವ್ಯಕ್ತಿಯೊಬ್ಬರಿಗೆ ಹಣದ ಆಮಿಷ ಒಡ್ಡಿದ್ದಾರೆ ಹಾಗೂ ಅವರ ಕಾರು ಚಾಲಕ ವ್ಯಕ್ತಿಯೊಬ್ಬರಿಗೆ ಹಣ ನೀಡಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಸಚಿವರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ.

Advertisement

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಚುನಾವಣಾಧಿಕಾರಿ ನಲಿನ್‌ ಅತುಲ್‌, ಸಚಿವ ಖಾದರ್‌ ಅವರು ಮಾ.27 ರಂದು
ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್‌ ಕಚೇರಿ ಬಳಿ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆ ಮಾಡುವ ವೇಳೆ ವ್ಯಕ್ತಿಯೊಬ್ಬರಿಗೆ ಹಣದ
ಆಮಿಷ ಒಡ್ಡಿರುವುದು ಹಾಗೂ ಅವರ ಕಾರು ಚಾಲಕ ವ್ಯಕ್ತಿಯೊಬ್ಬರಿಗೆ ಹಣ ನೀಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು
ಗುಂಡ್ಲುಪೇಟೆ ನಿವಾಸಿ ಎಲ್‌.ಸುರೇಶ್‌ ದೂರು ಸಲ್ಲಿಸಿ ದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ನ್ಯಾಯಾಲಯದ ಅನುಮತಿ
ಪಡೆದು, ಮಾ.28 ರಂದು ಎಫ್ಐಆರ್‌ ದಾಖಲಿಸ ಲಾಗಿದೆ ಎಂದರು. ಇದೇ ವೇಳೆ, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ದಾಳಿ
ನಡೆಸಲಾಗಿದ್ದು, 4.24 ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಪಕ್ಷೇತರ ಅಭ್ಯರ್ಥಿಗೆ ನೋಟಿಸ್‌: ಈ ಮಧ್ಯೆ, ಚುನಾವಣಾ ವೆಚ್ಚದ ಲೆಕ್ಕಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ತುಳಸಪ್ಪ ಡಿ.ಕೆ.ಎಂಬುವರಿಗೆ ಚುನಾವಣಾಧಿಕಾರಿ ಜಿ. ಜಗದೀಶ್‌ ನೋಟಿಸ್‌ ಜಾರಿ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next