Advertisement

FB ಇಂಡಿಯಾ ಅಧಿಕಾರಿ ವಿರುದ್ಧ ದೂರು

01:20 AM Aug 19, 2020 | mahesh |

ರಾಯ್‌ಪುರ/ಹೊಸದಿಲ್ಲಿ: ಭಾರತದಲ್ಲಿ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಲು ಫೇಸ್‌ಬುಕ್‌ ವೇದಿಕೆ ಕಲ್ಪಿಸಿದೆ ಎಂದು ಆರೋಪಿಸಿ ಭಾರತದ ಫೇಸ್‌ಬುಕ್‌ ಪಾಲಿಸಿ ಮುಖ್ಯಸ್ಥೆ ಅಂಖೀ ದಾಸ್‌ ವಿರುದ್ಧ ರಾಯ್‌ಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌, “ಭಾರತದಲ್ಲಿ ದ್ವೇಷದ ಭಾಷಣ ಪೋಸ್ಟ್‌ ಮಾಡುವ ನಾಯಕರ ಮೇಲೆ ಫೇಸ್‌ಬುಕ್‌ ಮೃದುಧೋರಣೆ ಅನುಸರಿಸಿದೆ’ ಎಂದು ವಿವಾದಿತ ವರದಿ ಬಿತ್ತರಿಸಿತ್ತು. ಈ ವರದಿ ಆಧರಿಸಿ ಪತ್ರಕರ್ತ ಅವೇಶ್‌ ತಿವಾರಿ, ರಾಯ್‌ಪುರದ ಕಬೀರ್‌ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ತನಿಖೆಗೆ ಒತ್ತಾಯ: ಫೇಸ್‌ಬುಕ್‌ ಇಂಡಿಯಾ ಭಾರತದ ಚುನಾವಣಾ ರಾಜಕೀಯದಲ್ಲಿ ಮಧ್ಯಪ್ರವೇಶಿಸಿದೆ. ಕೂಡಲೇ ಇಲ್ಲಿನ ತಂಡದ ನಾಯಕತ್ವದ ವಿರುದ್ಧ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಪತ್ರ ಬರೆದಿದ್ದಾರೆ.

ಸಚಿವ ರವಿಶಂಕರ್‌ ತಿರುಗೇಟು: ರಾಜಕೀಯ ನೆಲೆ ಕಳೆದುಕೊಂಡವರು ಫೇಸ್‌ಬುಕ್‌ ಸಂಸ್ಥೆಗಳನ್ನು ತೆಗಳುವ ಮೂಲಕ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಮತ್ತೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ” ಬಿಜೆಪಿ ಬೆಂಬಲಿಗರ ನೂರಾರು ಪುಟಗಳನ್ನೂ ಫೇಸ್‌ಬುಕ್‌ ಡಿಲೀಟ್‌ ಮಾಡಿದೆ. ಈ ಬಗ್ಗೆ ಕಾಂಗ್ರೆಸ್‌ ಏಕೆ ಮಾತಾಡುತ್ತಿಲ್ಲ?’ ಎಂದು ಪ್ರಶ್ನಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next