Advertisement

ತಿಂಗಳಾಂತ್ಯಕ್ಕೆ 24×7 ಯೋಜನೆ ಮುಗಿಸಿ

08:04 PM Apr 05, 2021 | Ganesh Hiremath |

ವಿಜಯಪುರ: ಬೇಸಿಗೆ ಬಿಸಿಲು ಹೆಚ್ಚುತ್ತಿರುವ ಕಾರಣ ನೀರು ಪೂರೈಕೆ ಅತ್ಯಂತ ಮಹತ್ವ ಪಡೆಯಲಿದೆ. ಹೀಗಾಗಿ ನಗರದ 24×7 ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತಿಂಗಳಾಂತ್ಯದೊಳಗೆ ಪೂರ್ಣಗೊಳಿಸಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧಿಕಾರಿಗಳು-ಗುತ್ತಿಗೆದಾರರಿಗೆ ಸೂಚನೆ ನೀಡಿದರು.

Advertisement

ನಗರದ ತಮ್ಮ ಸಾರ್ವಜನಿಕ ಸಂಪರ್ಕ ಕಾರ್ಯಾಲಯದಲ್ಲಿ ಬೇಸಿಗೆ ನಿಮಿತ್ಯ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸದ್ಯ ನಗರದಲ್ಲಿ 10-12 ದಿನಗಳವರೆಗೆ ನೀರು ಬಿಡುತ್ತಿದ್ದು, 4-5 ದಿನಗಳಿಗೊಮ್ಮೆ ಸರಿಯಾದ ಕ್ರಮದಲ್ಲಿ ನೀರು ಪೂರೈಸಬೇಕು ಎಂದು ನಿರ್ದೇಶನ ನೀಡಿದರು.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರು ಬಿಡುವ ಸಮಯ ನಿಗದಿ ಮಾಡಿ. ಬೆಳಿಗ್ಗೆ ನೀರು ಬಿಟ್ಟರೆ ಸಾರ್ವಜನಿಕರಿಗೆ ಅನುಕೂಲ. ರಾತ್ರಿ ಹೊತ್ತು ನೀರು ಬಿಡುವುದು ಬೇಡ, ಪೈಪ್‌ಲೈನ್‌ ಕಾಮಗಾರಿಗಾಗಿ ಅಗೆಯಲಾಗಿದೆ. ಕೂಡಲೇ ದುರಸ್ತಿ ಮಾಡಬೇಕು. ತೊರವಿ ತಾಂಡಾ ನಂ. 2ರಲ್ಲಿ ನಿರ್ಮಿಸಿದ ಓವರ್‌ಹೆಡ್‌ ಟ್ಯಾಂಕ್‌ಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಶೀಘ್ರವೇ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಸೂಚಿಸಿದರು. ಜಲಮಂಡಳಿಯಿಂದ ಅಧಿಕೃತ ಕರ ವಸೂಲಿಗಾರರ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡುವ ಮೂಲಕ ಅನಧಿಕೃತ ವ್ಯಕ್ತಿಗಳಿಗೆ ಸಾರ್ವಜನಿಕರು ಕರ ಪಾವತಿಸಿ ಮೋಸ ಹೋಗುವುದನ್ನು ತಪ್ಪಿಸಬೇಕು. ಸಾರ್ವಜನಿಕರು ನೀರಿನ ಮಿತ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅಧಿ  ಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಅನೇಕ ಕಡೆ ಕೊರೆಯಿಸಿದ ಬೋರ್‌ ವೆಲ್‌ಗ‌ಳಿಗೆ ಮೋಟರ್‌ ಅಳವಡಿಸಬೇಕು. ಜಲ ಮಂಡಳಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿ, ನಗರದ ಜನರಿಗೆ ಶುದ್ಧ ನೀರು ಕೊಡುವ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿದರು. ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ವಿಕ್ರಮ ಗಾಯಕವಾಡ, ಜಲಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರ ಪಟ್ಟಣಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಪಿ.ಚೆನ್ನಸ್ವಾಮಿ, ಬಿ.ವೈ.ನದಾಫ್‌, ಜೈನ್‌ ಇರಿಗೇಶನ್‌ ಗುತ್ತಿಗೆದಾರ ದೀಪಕ್‌ ಪಾಟೀಲ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್‌. ಕರಡಿ, ಅಶೋಕ ಬೆಲ್ಲದ, ರಾಜೇಶ್‌ ದೇವಿಗಿರಿ, ರಾಹುಲ್‌ ಜಾದವ, ಪರಶುರಾಮ್‌ ರಜಪೂತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next