Advertisement
ಒಂದು ವೇಳೆ ನಗದು ವ್ಯವಹಾರ 4 ಲಕ್ಷ ರೂ. ಎಂದಾದಲ್ಲಿ ನಾಲ್ಕು ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ನೀಡಬೇಕಾಗುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸು¾ಖ್ ಅಧಿಯಾ ಹೇಳಿದ್ದಾರೆ. ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇದನ್ನು ತಿಳಿಸಿದ್ದಾರೆ. ಫೆ. 1ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿÉ ಮಂಡಿಸಿದ ಬಜೆಟ್‌ನಲ್ಲಿ 3 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ನಿಷೇಧ ಹೇರುವ ಅಂಶ ಪ್ರಸ್ತಾವಿಸಿದ್ದರು.
Related Articles
ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿ ಪ್ರಕಾರ 1 ಕೋಟಿ ಖಾತೆಗಳನ್ನು ಪರಿಶೀಲಿಸಲಾಗಿದೆ. ನೋಟು ಅಪಮೌಲ್ಯದ ಬಳಿಕ ಠೇವಣಿ ಇರಿಸಿದ ವ್ಯಕ್ತಿಗಳು ನೀಡಿದ ಮಾಹಿತಿ ತಾಳೆಯಾಗದಿದ್ದರೆ ನೋಟಿಸ್ ನೀಡಲಾಗಿದೆ. ಇದುವರೆಗೆ 18 ಲಕ್ಷ ಮಂದಿಗೆ ಇಂಥ ನೋಟಿಸ್ ಕಳುಹಿಸಿ ಠೇವಣಿಯ ಮೂಲ ವಿವರಿಸುವಂತೆ ಸೂಚಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Advertisement
ಇಲಾಖೆಯ ದಾಖಲೆಗಳ ಪ್ರಕಾರ 2014-15ನೇ ಹಣಕಾಸು ವರ್ಷದಲ್ಲಿ 3.65 ಕೋಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 7 ಲಕ್ಷ ಕಂಪೆನಿಗಳು, 9.40 ಹಿಂದೂ ಅವಿಭಕ್ತ ಕುಟುಂಬಗಳು, 9.18 ಲಕ್ಷ ಸಂಸ್ಥೆಗಳು. ಇದೇ ಅವಧಿಯಲ್ಲಿ ಹಣಕಾಸು ಸೇರ್ಪಡೆಯನ್ವಯ ಶೂನ್ಯ ಠೇವಣಿ ಇರುವ 25 ಲಕ್ಷ ಜನಧನ ಖಾತೆಗಳನ್ನೂ ತೆರೆಯಲಾಗಿದೆ.
ಇದರ ಜತೆಗೆ ನ. 8ರಿಂದ ಡಿ. 30ರ ವರೆಗೆ 10 ಲಕ್ಷ ಕೋಟಿ ರೂ.ಗಳಷ್ಟು ಠೇವಣಿಗಳು ಸಂಗ್ರಹವಾಗಿದೆ. ಅವುಗಳ ಮೇಲೂ ಆದಾಯ ತೆರಿಗೆ ಕಣ್ಣಿರಿಸಿದೆ. ತೆರಿಗೆ ಇಲಾಖೆಗೆ ಇಷ್ಟು ಮೊತ್ತದ ಠೇವಣಿ ಸಂಗ್ರಹವಾಗಿದ್ದು ಅಚ್ಚರಿ ತಂದಿದೆ.
ಬಡ್ಡಿದರದಲ್ಲಿ ಯಥಾಸ್ಥಿತಿ?ಮಂಗಳವಾರ ಮುಂಬಯಿಯಲ್ಲಿ ಆರ್‌ಬಿಐ ತ್ತೈಮಾಸಿಕ ಸಾಲನೀತಿ ಪರಿಶೀಲನ ಸಭೆ ನಡೆಯಲಿದೆ. ಬಜೆಟ್ ಘೋಷಣೆಗಳ ಹಿನ್ನೆಲೆಯಲ್ಲಿ ಬಡ್ಡಿ ದರಗಳಲ್ಲಿ ಇಳಿಕೆಯಾಗಲಿವೆ ಎಂದು ಹೇಳಲಾಗಿತ್ತು. ಆದರೆ ಹಾಲಿ ನೀತಿಗಳನ್ನೇ ಮುಂದುವರಿಸಲು ಮತ್ತು ಬಡ್ಡಿ ದರಗಳಲ್ಲಿ ಬದಲು ಮಾಡದೇ ಇರುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳೇ ಹೆಚ್ಚು
ಎಂದು ಹೇಳಲಾಗಿದೆ.