Advertisement

ಬಾಲಕಿಯ ಎಲುಬು, ಬಟ್ಟೆ ಪತ್ತೆ

10:47 PM Dec 13, 2019 | Team Udayavani |

ಅಫಜಲಪುರ: ತಾಲೂಕಿನ ಹಾವನೂರ ಗ್ರಾಮದಲ್ಲಿ ಡಿ.5ರಂದು ನಾಪತ್ತೆಯಾಗಿದ್ದ ಬಾಲಕಿ ಶ್ವೇತಾ ನಿಂಗಪ್ಪ ಪೂಜಾರಿಯ ಬಟ್ಟೆ, ತಲೆ ಬುರುಡೆ, ಕೈಕಾಲಿನ ಎಲುಬುಗಳು ಪತ್ತೆಯಾಗಿವೆ. ಬಾಲಕಿ ನಾಪತ್ತೆಯಾಗಿರುವ ಕುರಿತು ಪೋಷಕರು ದೇವಲ ಗಾಣಗಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement

ಶುಕ್ರವಾರ ಬೆಳಗಿನ ಜಾವ ಹಾವನೂರ ಗ್ರಾಮದಿಂದ 1.5 ಕಿ.ಮೀ. ದೂರದಲ್ಲಿ ಶರಣಬಸಪ್ಪ ಇನಾಮದಾರ ಅವರ ಹೊಲದಲ್ಲಿ ಬಾಲಕಿಯ ಬಟ್ಟೆ, ತಲೆ ಬುರುಡೆ, ಕೈಕಾಲಿನ ಎಲುಬುಗಳು ಪತ್ತೆಯಾಗಿವೆ. ಬಟ್ಟೆಯ ಆಧಾರದ ಮೇಲೆ ತನ್ನ ಮಗಳೆಂದು ತಂದೆ ನಿಂಗಪ್ಪ ಪೂಜಾರಿ ಗುರುತಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸ್‌ ಅಧಿಕಾರಿಗಳು ಆಗಮಿಸಿದ್ದು, ಹೆಚ್ಚಿನ ತನಿಖೆಗಾಗಿ ತಲೆ ಬುರುಡೆ, ಎಲುಬುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next