Advertisement

ಕೇಂದ್ರ ಸರ್ಕಾರದ ದೂರದೃಷ್ಟಿಯಿಂದ ಆರ್ಥಿಕ ಸದೃಢತೆ

04:09 PM Aug 16, 2022 | Team Udayavani |

ಕಲಬುರಗಿ: ಕಳೆದೆರಡು ವರ್ಷಗಳಿಂದ ನೆರೆಯ ರಾಷ್ಟ್ರಗಳಲ್ಲದೇ ವಿಶ್ವದ ಅನೇಕ ದೇಶಗಳು ಆರ್ಥಿಕ ಹೊಡೆತ ಅನುಭವಿಸಿದ್ದರೆ ಭಾರತ ದೇಶ ಮಾತ್ರ ಆರ್ಥಿಕವಾಗಿ ಹೆಚ್ಚಿನ ನಷ್ಟ ಹೊಂದದೇ ಮುನ್ನೆಡೆಯುತ್ತಿರುವುದು ಕೇಂದ್ರದ ಸರ್ಕಾರದ ದೂರದೃಷ್ಟಿ ಯೋಜನೆಗಳು ಹಾಗೂ ನಿರ್ಧಾರಗಳು ಕಾರಣವಾಗಿವೆ ಎಂದು ಬಿಜೆಪಿ ಮುಖಂಡ ಶಿವಕಾಂತ ಮಹಾಜನ್‌ ತಿಳಿಸಿದರು.

Advertisement

ನಗರದ ಬಂಬು ಬಜಾರ ನೇತಾಜಿ ನಗರದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಿದ್ದೇಶ್ವರ ಕಾಲೇಜುದಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಹಾಗೂ ಪೌರಕಾರ್ಮಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

ವಿಶ್ವವೇ ಇಂದು ಭಾರತದತ್ತ ನೋಡುವಂತಾಗಿದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟನಡೆ ಹಾಗೂ ಚಾಣಾಕ್ಷತನದ ನಿರ್ಧಾರಗಳೇ ಕಾರಣವಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಯೊಂದಿಗೆ ಭಾರತ ದೇಶ ಮತ್ತಷ್ಟು ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿವರಣೆ ನೀಡಿದರು.

ಶಾಲೆಯ ಅಧ್ಯಕ್ಷರಾದ ಗೋಪಾಲರಾವ್‌ ಹಿರನಾಗಾಂವ, ಬಡಾವಣೆಯ ಹಿರಿಯ ಮುಖಂಡರು, ಪೋಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next