Advertisement
ಇಂತಹ ಶುಭ ಸಮಾರಂಭಗಳಲ್ಲಿ ನಾವೇ ಮಾಡಿದರೂ, ಕೂಡ ಅನಗತ್ಯವಾಗಿ ದುಡ್ಡು ವೆಚ್ಚವಾಗುತ್ತದೆ ಎಂದು ಸಾಮಾನ್ಯರು ಆಗಾಗ ಗೊಣಗಾಡುತ್ತಾರೆ. ಆದರೆ ಈ ಸಮಯದಲ್ಲಿ ಹಣ ನಿರ್ವಹಣೆ ಬಗ್ಗೆ ಈ ಮೊದಲೇ ಯೋಚನೆ ಹಾಗೂ ಯೋಜನೆಗಳ ಕೊರತೆಯಿಂದಾಗಿ ವಿನಾಃ ಕಾರಣ ಹಣವೂ ನಮ್ಮ ಕೈಬಿಡುತ್ತದೆ. ಮದುವೆ ಹಾಗೂ ಮನೆ ಕಟ್ಟುವುದು, ಹಾಗೂ ಶುಭ ಸಮಾರಂಭಗಳಲ್ಲಿ ನಾವು ತೆಗೆದಿಟ್ಟಿರುವ ಬಜೆಟ್ ನಿರ್ವಹಿಸಲು ಕೆಲವೊಂದು ಸುಲಭ ಉಪಾಯ ಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಹಣ ನಿರ್ವಹಣೆಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಯಬಹುದು.
ನಾವು ಮನೆಯಲ್ಲಿ ಮದುವೆ ಅಥವಾ ಗೃಹ ಪ್ರವೇಶವೂ ಮಾಡುತ್ತಿರಬೇಕಾದರೆ ಹೆಚ್ಚು ಹಣವೂ ದುಂದು ವೆಚ್ಚವೂ ಆಗುವುದು ಕೂಡ ಇದೇ ಸಮಯದಲ್ಲಿ. ಹಾಗಾಗಿ ನಾವು ಹಣ ನಿರ್ವಹಣೆಯ ಬಗ್ಗೆ ಈ ಮೊದಲೇ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿರಬೇಕು. ಉದಾ: ಮದುವೆಯಾದರೆ ಬಂಗಾರ ಅಥವಾ ಇನ್ನಿತರ ವಸ್ತುಗಳನ್ನು ಕೊಳ್ಳುವಾಗ ಹಬ್ಬದ ಸಮಯದಲ್ಲಿ ಕೆಲವೊಂದು ಆಫರ್‌ಗಳನ್ನು ಘೋಷಿಸಿದಾಗ ನಾವು ಅವುಗಳನ್ನು ತೆಗೆದಕೊಂಡರೆ, ಅದರಲ್ಲಿ ಎಷ್ಟೋ ಹಣವನ್ನು ಉಳಿಸಬಹುದು. ಮುಂಗಡ ಬುಕ್ಕಿಂಗ್
ಯಾವುದೇ ಕಾರ್ಯವಾಗಲಿ ಇನ್ನು ಎರಡು ಮೂರು ದಿನಗಳಿರುವಾಗ ನಾವು ಸರಕು ಹಾಗೂ ಸಾಮಗ್ರಿಗಳನ್ನು ಮುಂಗಡವಾಗಿ ಬುಕ್ಕಿಂಗ್ ಮಾಡುತ್ತೇವೆ. ಆಗ ಅದು ಸೀಜನ್ ಆಗಿರುವುದರಿಂದಾಗಿ ಹೆಚ್ಚಿನ ಹಣವನ್ನು ವ್ಯಯಿಸಬೇಕಾ ಗುತ್ತದೆ. ಇದಕ್ಕೆ ಅನಾವಶ್ಯಕವಾಗಿ ದುಡ್ಡು ನೀಡಬೇಕಾಗುತ್ತದೆ. ಹಾಗಾಗಿ ನಾವು ಶುಭ ಕಾರ್ಯದ ದಿನಾಂಕ ನಿಗದಿಯಾದ ದಿನದಿಂದಲೇ ನಾವು ಬುಕ್ಕಿಂಗ್ ಮುಂದಾ ಗಬೇಕು. ಉದಾ: ಮದುವೆಗೆ ಕಲ್ಯಾಣ ಮಂಟಪ ಬುಕ್ಕಿಂಗ್ ಮಾಡುವಾಗ, ಮದುವೆ ಸೀಜನ್‌ನಲ್ಲಿ ಬುಕ್ಕಿಂಗ್ ಮಾಡಲು ಹೊರಟರೇ, ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಅದಕ್ಕಾಗಿ ನಾವು ಈ ಮೊದಲೇ ಬುಕ್ಕಿಂಗ್ ಮಾಡಿದ್ದರೇ, ಹಣ ನಿರ್ವಹಣೆ ಸಾಧ್ಯವಾಗಬಹುದು.
Related Articles
ಶುಭ ಸಮಾರಂಭಗಳಲ್ಲಿ ಹಣದ ದುಂದುವೆಚ್ಚ ಮಾಡದೇ ಇದ್ದರೆ, ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು. ಇದೊಂದು ಸುಲಭ ದಾರಿ. ಉದಾ: ಮನೆಯ ಕಟ್ಟಡ ನಿರ್ಮಾಣ ಮಾಡುವಾಗ ಅನಗತ್ಯವಾಗಿ ಐಷಾರಾಮಿ ವಸ್ತುಗಳ ಹಾಗೂ ಬಹುವೆಚ್ಚದ ಸಾಮಗ್ರಿಗಳನ್ನು ತರುವ ಬದಲು, ಕಡಿಮೆ ವೆಚ್ಚದ ಹೆಚ್ಚು ಬಾಳಿಕೆ ಬರುವ ಸಾಮಗ್ರಿಗಳಿಗೆ ಹೆಚ್ಚು ಗಮನಹರಿಸಿದಾಗ ಹಣ ನಿರ್ವಹಣೆ ಮಾಡಬಹುದು.
Advertisement
••ಅಭಿನವ