Advertisement

ರೈತರಿಗೆ ಹಣಕಾಸು ನೆರವು ಶೀಘ್ರ ಘೋಷಣೆ ಸಾಧ್ಯತೆ

09:40 AM Jan 12, 2019 | Team Udayavani |

ಹೊಸದಿಲ್ಲಿ:  ಜನರಲ್‌ ಕೆಟಗರಿಯಲ್ಲಿ ಬರುವ ಬಡವರಿಗೆ ಶೇ.10 ಮೀಸಲಾತಿ ಕಲ್ಪಿಸಿ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ, ಸದ್ಯದಲ್ಲೇ ಸಾರ್ವತ್ರಿಕ ಮೂಲ ಆದಾಯ ಮತ್ತು ರೈತರ ಅನುಕೂಲಕ್ಕಾಗಿ  ಹೊಸ ಯೋಜನೆಯನ್ನು ಘೋಷಿ ಸುವ ಸಾಧ್ಯತೆಯಿದೆ. ದೇಶದ ಜನಸಂಖ್ಯೆಯ ಶೇ.47ರಷ್ಟಿರುವ ರೈತರಿಗೆ ತೆಲಂಗಾಣದ ರೈತ ಬಂಧು ಯೋಜನೆಯ ಮಾದರಿಯಲ್ಲೇ ಹೊಸ ಯೋಜನೆ ಜಾರಿ ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಅದರಂತೆ, ಒಂದು ಎಕರೆಗಿಂತ ಕಡಿಮೆ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡುವ ರೈತರಿಗೆ ಎಕರೆಗೆ 4 ಸಾವಿರ ರೂ.ಗಳು ಅಥವಾ ಆ ಕೃಷಿ ಭೂಮಿಯ ಪ್ರಮಾಣಕ್ಕೆ ಅನುಗುಣವಾಗಿ ನಗದು ನೀಡುವ ಯೋಜನೆ ಇದಾಗಿದೆ. ಹಿಂಗಾರು ಮತ್ತು ಮುಂಗಾರು ಋತುವಿನಲ್ಲಿ ಈ ಮೊತ್ತ ನೀಡಲು ಚಿಂತನೆ ನಡೆಸಲಾಗಿದೆ.

Advertisement

ಆದರೆ, ಇದರ ಫ‌ಲಾನುಭವಿಗಳಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಬಿಪಿಎಲ್‌ ಕುಟುಂಬಗಳಿಗೆ ಮಾಸಿಕ 2,500 ರೂ. ನೀಡುವ ಸಾರ್ವತ್ರಿಕ ಮೂಲ ಆದಾಯವನ್ನೂ ಸರಕಾರ ಸದ್ಯದಲ್ಲೇ ಘೋಷಿಸುವ ನಿರೀಕ್ಷೆಯಿದೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next