Advertisement

ಇನ್ನೊಂದು ವರ್ಷ ಹೊಸ ಯೋಜನೆ ಇಲ್ಲ ; ಕೇಂದ್ರ ವಿತ್ತ ಸಚಿವಾಲಯ ಮಹತ್ವದ ಪ್ರಕಟನೆ

07:51 AM Jun 06, 2020 | Hari Prasad |

ಹೊಸದಿಲ್ಲಿ: ಕೋವಿಡ್ ನಿಂದಾಗಿ ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿದ್ದು, ಈಗಾಗಲೇ 20 ಲಕ್ಷ ಕೋ.ರೂ. ಆರ್ಥಿಕ ಪ್ಯಾಕೇಜ್‌ ಘೋಷಿಸಲಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷ ಹೊಸ ಯೋಜನೆ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ.

ದೇಶದ ಸೋಂಕು ಪರಿಸ್ಥಿತಿ ಹಿಂದೆಂದೂ ಕಾಣದಂಥದ್ದು. ಹೀಗಾಗಿ ಸಾರ್ವಜನಿಕ ಹಣವನ್ನು ಕಾಪಾಡುವುದಕ್ಕೆ ಮತ್ತು ಅದರ ಸದ್ವಿನಿಯೋಗಕ್ಕೆ ಪ್ರಾಮುಖ್ಯ ನೀಡಬೇಕಿದೆ.

ಹಾಗಾಗಿ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಘೋಷಿಸಿರುವ ಯೋಜನೆ ಮತ್ತು ಇತ್ತೀಚೆಗೆ ಪ್ರಕಟಿಸಲಾದ ಆತ್ಮನಿರ್ಭರ ಪ್ಯಾಕೇಜ್‌ಗಳಿಗೆ ಮಾತ್ರ ಸಾರ್ವಜನಿಕರ ಹಣ ಬಳಕೆಯಾಗಲಿದೆ ಎಂದದು ಹೇಳಿದೆ.

ಬಜೆಟ್‌ ಯೋಜನೆಗಳು, ಹಣಕಾಸು ಸ್ಥಾಯೀ ಸಮಿತಿಯ ಅನುಮೋದನೆ ಪಡೆದಿರುವ ಯೋಜನೆಗಳನ್ನು 2021ರ ಮಾ. 31ರ ವರೆಗೆ ಅಮಾನತಿನಲ್ಲಿಡಲಾಗುತ್ತದೆ. ಹೊಸ ಯೋಜನೆಗಳ ಪ್ರಸ್ತಾವನೆ ಕಳುಹಿಸದಿರುವಂತೆ ಇಲಾಖೆಗಳಿಗೆ ಸೂಚಿಸಲಾಗಿದೆ.

Advertisement

ಆರ್ಥಿಕ ಕುಸಿತ ಕಾರಣ
ಕಂಟ್ರೋಲರ್‌ ಜನರಲ್‌ ಆಫ್ ಅಕೌಂಟ್ಸ್‌ (ಸಿಜಿಎ) ಅಂಕಿಅಂಶ  ಪ್ರಕಾರ, 2020ರ ಎಪ್ರಿಲ್‌ನಲ್ಲಿ ದೇಶದ ಆದಾಯ 27,548 ಕೋ.ರೂ. ಇದು ಭಾರತದ ಬಜೆಟ್‌ನ ಶೇ. 1.2ರಷ್ಟು ಮೊತ್ತ. ಕಳೆದ ವರ್ಷ ಇದೇ ತಿಂಗಳಲ್ಲಿ ಭಾರತದ ಆದಾಯ 3.07 ಲಕ್ಷ ಕೋಟಿ ರೂ. ಆಗಿತ್ತು! ಅದು ಭಾರತದ ಆ ವರ್ಷದ ಬಜೆಟ್‌ನ ಶೇ.10ರಷ್ಟು ಮೊತ್ತಕ್ಕೆ ಸಮ.

ಭಾರತದ ಒಟ್ಟಾರೆ ದೇಶೀಯ ಉತ್ಪನ್ನ (ಜಿಡಿಪಿ) ಕಳೆದ 11 ವರ್ಷಗಳಲ್ಲಿಯೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಮೂಡೀಸ್‌ ಇನ್ವೆಸ್ಟರ್‌ ಕಂಪೆನಿಯು ಭಾರತಕ್ಕೆ ಇದ್ದ ಕ್ರೆಡಿಟ್‌ ರೇಟಿಂಗ್‌ ಅನ್ನು ಕೆಳಕ್ಕೆ ಇಳಿಸಿರುವುದು ಹೂಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಸರಕಾರ ಹೊಸ ಯೋಜನೆಗಳನ್ನು ಪ್ರಕಟಿಸದಿರಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next