Advertisement

Karnataka: SEP ಗೆ ಕೊನೆಗೂ ಆಯೋಗ

09:56 PM Oct 11, 2023 | Team Udayavani |

ಬೆಂಗಳೂರು : ಬಹು ಚರ್ಚಿತ ರಾಜ್ಯ ಶಿಕ್ಷಣ ನೀತಿಯ ಕರಡು ರಚನೆ (ಎಸ್‌ಇಪಿ) ಮಾಡುವ ನಿಟ್ಟಿನಲ್ಲಿ ಕೊನೆಗೂ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ. ಅದಕ್ಕೆ ಯುಜಿಸಿಯ ನಿವೃತ್ತ ಅಧ್ಯಕ್ಷ , ಜೆಎನ್‌ಯು ಪ್ರಾದೇಶಿಕ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ಸುಖದೇವ್‌ ಥೋರಟ್‌ರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.

Advertisement

ಅವರ ಜತೆಗೆ 15 ಸದಸ್ಯರನ್ನೂ ನೇಮಿಸಲಾಗಿದೆ. ಪ್ರೊ.ಯೋಗೇಂದ್ರ ಯಾದವ್‌ ಸೇರಿದಂತೆ 8 ಜನರನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಈ ಸಮಿತಿಗೆ ಮುಂದಿನ ವರ್ಷದ ಪೆ.28ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಎಸ್‌ಇಪಿ ರಚನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಡಿಸಿಇಆರ್‌ಟಿ, ಉನ್ನತ ಶಿಕ್ಷಣ ಪರಿಷತ್‌ ಈ ಆಯೋಗಕ್ಕೆ ಅಗತ್ಯವಾದ ಎಲ್ಲ ಸಹಕಾರ ನೀಡುವಂತೆ ಸ್ಪಷ್ಟವಾಗಿ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next