Advertisement

ಕೊನೆಗೂ ಸೆರೆಯಾದ ಮೂಡಿಗೆರೆಯ ಜನರ ನಿದ್ದೆಗೆಡಿಸಿದ್ದ ಭೈರ

09:36 PM Dec 11, 2022 | Team Udayavani |

ಚಿಕ್ಕಮಗಳೂರು : ಮೂಡಿಗೆರೆ ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗ ಭೈರ ಕೊನೆಗೂ ಭಾನುವಾರ ಸೆರೆಯಾಗಿದ್ದಾನೆ.

Advertisement

ಮೂಡಿಗೆರೆ ತಾಲೂಕಿನ ಊರಬಗೆ ಸಮೀಪ ಭೈರ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಚರಣೆಗೆ ಇಳಿದ ಅರಣ್ಯ ಇಲಾಖೆ ಸಂಜೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತಿಂಗಳ ಹಿಂದೆ ಭೈರನಿಗಾಗಿ ಕಾರ್ಯಚರಣೆ ನಡೆಸಲಾಗಿತ್ತು, ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕಾಡಿನತ್ತ ಮುಖ ಮಾಡಿದ್ದರಿಂದ ಕಾರ್ಯಾಚರಣೆ ವಿಫಲವಾಗಿ ಜನರು ಆತಂಕದಲ್ಲೇ ದಿನಕಳೆಯುವಂತೆ ಆಗಿತ್ತು. ಭೈರನ ಸೆರೆ ಕಾರ್ಯಾಚರಣೆ ಕಳೆದೊಂದು ವಾರದಿಂದ ಮತ್ತೆ ಆರಂಭಿಸಲಾಗಿತ್ತು.

ಮೂರು ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು,ಈಗಾಗಲೇ ಎರಡು ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದು,ಮೂರನೇ ಪುಂಡಾನೆ ಭೈರ ಸೆರೆಯಾಗಿದೆ. ಅಭಿಮನ್ಯು, ಭೀಮ, ಪ್ರಶಾಂತ, ಮಹೇಂದ್ರ, ಹರ್ಷ ಎಂಬ ಸಾಕಾನೆಗಳು ಕಾರ್ಯಾಚರಣೆಯ ಭಾಗವಾಗಿದ್ದವು.

ಲಾರಿಗೆ ಹತ್ತಿಸಲು ಹರಸಾಹಸ
ಎಷ್ಟೇ ಪ್ರಯತ್ನ ಪಟ್ಟರೂ ಮಾತು ಕೇಳದ ಭೈರನನ್ನ ತುಂತುರು ಮಳೆಯ ನಡುವೆ ಲಾರಿಗೆ ಹತ್ತಿಸಲು ಮಾವುತರು ಹರಸಾಹಸಪಟ್ಟರು. ಕೊನೆಗೂ ಕಾಡಾನೆಯನ್ನ ಲಾರಿಗೆ ಹತ್ತಿಸುವಲ್ಲಿ ಸಾಕಾನೆಗಳು ಯಶಸ್ವಿಯಾದವು.ಕಾರ್ಯಾಚರಣೆ ನೋಡಲು ಭಾರೀ ಜನಸ್ತೋಮ ಸೇರಿತ್ತು.

Advertisement

ಭೈರನನ್ನು ನಾಗರಹೊಳೆಗೆ ಅಧಿಕಾರಿಗಳು ಸ್ಥಳಾಂತರಿಸಲಾಗುತ್ತಿದೆ. ಹಲವು ವರ್ಷಗಳಿಂದ ಭಾರೀ ಉಪಟಳ ನೀಡುತ್ತಿದ್ದ ಭೈರ ಇಬ್ಬರ ಜೀವವನ್ನು ತೆಗೆದಿದ್ದ.

ಭೈರನನ್ನು ಹಿಡಿಯಲು ವೈದ್ಯರು, 100ಕ್ಕೂ ಅಧಿಕ ಅರಣ್ಯ ಸಿಬ್ಬಂದಿ, ಹಲವು ಆನೆಗಳನ್ನು ಕರೆಸಿಕೊಂಡು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಕೆಲ ದಿನಗಳ ಹಿಂದೆ ಊರುಬಗೆ ಗ್ರಾಮಕ್ಕೆ ಆಪರೇಷನ್ ಭೈರ ಕಾರ್ಯಾಚರಣೆಗೆ ಆಗಮಿಸಿದ ಅಭಿಮನ್ಯು ಆನೆಗೆ ಅನಾರೋಗ್ಯ ಕಾಣಿಸಿಕೊಂಡ‌ ಹಿನ್ನಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಕಾರ್ಯಾಚರಣೆಗೆ ಬಂದಿದ್ದ ಇನ್ನೆರಡು ಆನೆಗಳಾದ ಅಜಯ್, ಗೋಪಾಲಸ್ವಾಮಿ ಎಂಬ ಆನೆಗಳಿಗೆ ಮದ ಬಂದಿದ್ದರಿಂದ ಅವುಗಳನ್ನು ಕಾರ್ಯಾಚರಣೆಗೆ ಬಳಸಲು ಅಸಾಧ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next