Advertisement

ಬಾಂಗ್ಲಾದೇಶ ವಿರುದ್ಧ ಇಂದು ಅಂತಿಮ ಟಿ20 : ವನಿತೆಯರ ಗುರಿ 3-0 ಕ್ಲೀನ್‌ಸ್ವೀಪ್

11:16 PM Jul 12, 2023 | Team Udayavani |

ಮಿರ್ಪುರ್‌: ಬಾಂಗ್ಲಾದೇಶ ವಿರುದ್ಧ ಈಗಾಗಲೇ ಟಿ20 ಸರಣಿ ವಶಪಡಿಸಿಕೊಂಡಿರುವ ಭಾರತದ ವನಿತಾ ಕ್ರಿಕೆಟ್‌ ತಂಡವೀಗ 3-0 ಕ್ಲೀನ್‌ಸ್ವೀಪ್ ಯೋಜನೆಯೊಂದಿಗೆ ಗುರುವಾರ ಅಂತಿಮ ಪಂದ್ಯವನ್ನು ಆಡಲಿಳಿಯಲಿದೆ. ಇನ್ನೊಂದೆಡೆ ಬಾಂಗ್ಲಾ ತಂಡಕ್ಕೆ ತವರಲ್ಲಿ ಒಂದಿಷ್ಟಾದರೂ ಪ್ರತಿಷ್ಠೆ ಉಳಿಸಿಕೊಳ್ಳಲೇಬೇಕಾದ ಒತ್ತಡ.

Advertisement

ಯಾವಾಗ 95ರಷ್ಟು ಕಡಿಮೆ ಸ್ಕೋರ್‌ ದಾಖಲಿಸಿಯೂ ದ್ವಿತೀಯ ಪಂದ್ಯವನ್ನು ಭಾರತ ಉಳಿಸಿಕೊಂಡಿತೋ, ಹರ್ಮನ್‌ಪ್ರೀತ್‌ ಕೌರ್‌ ಬಳಗದ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿದೆ. ಈ ನಡುವೆ ಬ್ಯಾಟಿಂಗ್‌ ಸುಧಾರಣೆ ಕಡೆಗೂ ಗಮನ ನೀಡಬೇಕಾದ ಸಮಯ ಎದುರಾಗಿದೆ.

ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ಭಾರತ 95ರಷ್ಟು ಕಡಿಮೆ ಮೊತ್ತಕ್ಕೆ ಕುಸಿದದ್ದು ಅಚ್ಚರಿ ಜತೆಗೆ ಆಘಾತವನ್ನೂ ಮೂಡಿಸಿದೆ. ಅದು ಬೌಲಿಂಗ್‌ ಟ್ರ್ಯಾಕ್‌ ಆಗಿತ್ತೆಂಬುದು ಬೇರೆ ವಿಷಯ. ಆದರೂ ನೂರರೊಳಗೆ ಆಲೌಟ್‌ ಆಗುವಷ್ಟು ಕಳಪೆಯೇನಲ್ಲ ನಮ್ಮ ತಂಡ. ಒಂದು ಟೀಮ್‌ ಆಗಿ ಆಡುವುದು ಮುಖ್ಯ ಎಂಬುದು ಭಾರತ ಇಲ್ಲಿ ಕಲಿಯಬೇಕಿರುವ ಪಾಠ.

Advertisement

Udayavani is now on Telegram. Click here to join our channel and stay updated with the latest news.

Next