Advertisement

ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಕಾರ್ಯ ಅಂತಿಮ ಘಟ್ಟಕ್ಕೆ

06:59 PM Apr 18, 2021 | Team Udayavani |

ಆಳಂದ: ರಾಜ್ಯ ಸರ್ಕಾರ ಶಾಲೆ ಬಿಟ್ಟಮಕ್ಕಳ ಕುರಿತು ಸಮೀಕ್ಷೆ ನಡೆಸಿ,ವರದಿ ಸಲ್ಲಿಸುವಂತೆ ವರದಿ ಕೇಳಿದಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿಮೂಲಕ ತಾಲೂಕಿನಾದ್ಯಂತ ಸಮೀಕ್ಷಾ ಕಾರ್ಯ ಕೈಗೊಂಡಿದ್ದು ಅಂತಿಮ ಹಂತಕ್ಕೆತಲುಪಿದ್ದು, ಶೀಘ್ರವೇ ಪೂರ್ಣ ಅಂಕಿಅಂಶಗಳ ವರದಿ ಸಲ್ಲಿಸಲಾಗುವುದುಎಂದು ತಾಪಂ ಇಒ ನಾಗಮೂರ್ತಿಶೀಲವಂತ ತಿಳಿಸಿದ್ದಾರೆ.

Advertisement

ಶನಿವಾರ ನಿಂಬಾಳ ಗ್ರಾಮಪಂಚಾಯತ ವ್ಯಾಪ್ತಿಯ ಚಲಗೇರಾಖೇಡ ಉಮ್ಮರ್ಗಾ ನಿಂಬಾಳದಲ್ಲಿಪಂಚಾಯಿತಿ ಸಿಬ್ಬಂದಿ ಶಾಲೆಯಿಂದಹೊರಗುಳಿದ ಮಕ್ಕಳನ್ನು ಗುರುತಿಸಿಅವರನ್ನು ಪುನಃ ಶಾಲೆಗೆ ಸೇರಿಸುವಕುರಿತು ಸಮೀûಾ ಕಾರ್ಯನಡೆಯಿತು.ಸಮೀಕ್ಷಾ ಕಾರ್ಯದಲ್ಲಿಸಿಬ್ಬಂದಿ ರವಿಕುಮಾರ ಮಾಳಗೆಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಇಲಾಖೆ 6 ರಿಂದ 14 ವರ್ಷದಮಕ್ಕಳು ಯಾವುದೇ ಶಾಲೆಗಳಿಗೆದಾಖಲಾಗದೆ ಮತ್ತು ದಾಖಲಾಗಿಶಾಲೆಯಿಂದ ಹೊರುಗುಳಿದಮಕ್ಕಳನ್ನು ಗುರುತಿಸುವ ಸಮೀಕ್ಷೆಮಾಡಲಾಗುತ್ತಿದೆ.

ಶಿಕ್ಷಣ ಇಲಾಖೆ 6 ರಿಂದ 14ವರ್ಷದ ಮಕ್ಕಳನ್ನು ಕಡ್ಡಾಯವಾಗಿಶಾಲೆಗೆ ಸೇರಿಸಿ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಸೈಕಲ್‌, ಮಧ್ಯಾಹ್ನಬಿಸಿಯೂಟ ನೀಡುತ್ತಿದೆ. ಆದರೂಕೆಲವು ಮಕ್ಕಳು ದೀರ್ಘ‌ ಕಾಲದವರೆಗೆ ಶಾಲೆಯಿಂದ ದೂರ ಉಳಿದುಗೈರು ಹಾಜರಾಗುತ್ತಿರುವುದು ಕಂಡುಬರುತ್ತಿದೆ.

ಶಾಲೆಯಲ್ಲಿ ದಾಖಲಾತಿಹೊಂದಿ, ಕಾರಣಾಂತರಗಳಿಂದ ಶಾಲೆಬಿಟ್ಟಿರುವುದು ಮತ್ತು ಯಾವುದೇಶಾಲೆಗೆ ದಾಖಲಾಗದೇ ಹಾಗೆಉಳಿದಿರುವ ಮಕ್ಕಳ ಸಮೀಕ್ಷೆ ಮಾಡಿಅಂಥ ಮಕ್ಕಳನ್ನು ಪುನಃ ಶಾಲೆಗೆಸೇರಿಸುವ ಕಾರ್ಯ ಮಾಡಲಾಗುತ್ತಿದೆಎಂದು ತಿಳಿಸಿದ್ದಾರೆ.ಸಿಬ್ಬಂದಿಗಳಾದ ಸೇವಂತಿಬಾಯಿವಗ್ಗಿ, ನಿಂಗಯ್ಯ ಸ್ವಾಮಿ, ಲಕ್ಷ್ಮೀಪುತ್ರಶೆಟಗಾರ, ಬಸವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next