ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿದ್ದ ವಿದ್ಯಾಗಣಪತಿ ಪೂಜಾ ಮಹೋತ್ಸವ ಗುರುವಾರ ಅಂತಿಮ ತೆರೆ ಕಂಡಿತು. ಆ ಪ್ರಯುಕ್ತ ಬೆಳಿಗ್ಗೆ ಮೆಘಾಷೋ ಖ್ಯಾತ ಹಿನ್ನಲೆ ಗಾಯಕ
ಅಜಯ್ ವಾರಿಯರ್ ಮತ್ತು ಸಂಗಡಿಗರಿಂದ ಆರ್ಕೆಸ್ಟ್ರಾ, ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.
ನಂತರ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಸುಮಾರು 13ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ನಂತರ ಬಸವರಾಜ್ ಬ್ರಾಸ್ ಬ್ಯಾಂಡ್ ಚಲಿಸುವ ಆರ್ಕೆಸ್ಟ್ರಾ, ಗುರುವಾಯನಕೆರೆ ಸೃಷ್ಟಿ ಆರ್ಟ್ಸ್ ರವರಿಂದ ಕೀಲುಕುದುರೆ, ಚಿಲಿಪಿಲಿ ಗೊಂಬೆ ಮತ್ತು ಕರಗ ನೃತ್ಯಗಳು ಹಾಗೂ ಸ್ಥಳೀಯ ಕಲಾವಿದರಿಂದ ಹಲಗೆ ಮತ್ತು ವಿವಿದ ವಾದ್ಯಗೋಷ್ಠಿ, ಮಾರ್ಪಳ್ಳಿ ಚಂಡೆಬಳಗದವರಿಂದ ಚಂಡೆವಾದನ ಹಾಗೂ ನೃತ್ಯ, ಅಲ್ಲದೆ ನಗರದ ಜೇಸಿ ವೃತ್ತದಲ್ಲಿ ವಿಶೇಷವಾದ ಸಿಡಿಮದ್ದು ಪ್ರದರ್ಶನದೊಂದಿಗೆ ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿ ಶ್ರೀ ವಿದ್ಯಾಗಣಪತಿಯ ಭವ್ಯ ಮೆರವಣಿಗೆ ನಡೆಯಿತು.
ವಿಸರ್ಜನಾ ಮಹೋತ್ಸವದ ಅಂಗವಾಗಿ ಪಟ್ಟಣದ 10ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.
ಮೆರವಣಿಗೆ ವೇಳೆ ಬಿಗಿ ಪೊಲೀಸ್ ಬಂದೊಬಂದೋಬಸ್ತ್ ಮಾಡಲಾಗಿತ್ತು.