Advertisement

Chandrayaan-3: ಇಂದು 2 ಗಂಟೆಗೆ ಅಂತಿಮ ಡಿಬೂಸ್ಟ್‌

12:09 AM Aug 20, 2023 | Team Udayavani |

ಹೊಸದಿಲ್ಲಿ: ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ರೋವರ್‌ ಸುಸ್ಥಿತಿಯಲ್ಲಿದ್ದು ಶನಿವಾರ ಚಂದ್ರನ ಮೇಲ್ಮೆ„ನಿಂದ ಸುಮಾರು 113 ಕಿ.ಮೀ. ದೂರಕ್ಕೆ ತಲುಪಿದೆ. ರವಿವಾರ‌ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಚಂದ್ರಯಾನ-3ರ ಎರಡನೇ ಹಾಗೂ ಕೊನೆಯ ಹಂತದ ಡಿಬೂಸ್ಟಿಂಗ್‌ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

Advertisement

ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದರೆ, ವಿಕ್ರಮ್‌ ಮತ್ತು ಪ್ರಗ್ಯಾನ್‌ ಚಂದ್ರನಿಂದ 30 ಕಿ.ಮೀ. ದೂರಕ್ಕೆ ತಲುಪಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಆ.23ರಂದು ಚಂದಿರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next