Advertisement

ಪರಸ್ತ್ರೀಯೊಂದಿಗೆ ಸಿಕ್ಕಿ ಬಿದ್ದ ನಿರ್ಮಾಪಕ: ಕಾರಿಗೆ ಅಡ್ಡ ಬಂದ ಪತ್ನಿ; ಮುಂದಾಗಿದ್ದೇನು?

11:11 AM Oct 27, 2022 | Team Udayavani |

ಮುಂಬಯಿ : ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಪರಸ್ತ್ರೀಯೊಂದಿಗೆ ಇದ್ದಾಗ ಪತ್ನಿಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದು, ಅಡ್ಡ ಬಂದ ಪತ್ನಿಯ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.

Advertisement

ಮಹಾರಾಷ್ಟ್ರದ ಅಂಧೇರಿಯ ವಸತಿ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಿಶ್ರಾ ಅವರನ್ನು ಇನ್ನೊಬ್ಬ ಮಹಿಳೆಯೊಂದಿಗೆ ಪತ್ನಿ ನೋಡಿದ್ದಾರೆ. ದೂರಿನ ಪ್ರಕಾರ, ಮಿಶ್ರಾನನ್ನು ಹುಡುಕುತ್ತಾ ಹೊರಗೆ ಬಂದಿದ್ದ ವೇಳೆ ಕಾರಿನೊಳಗೆ ಪರ ಸ್ತ್ರೀಯನ್ನು ಕಂಡು ಪ್ರಶ್ನಿಸಿ ಎದುರಿಗೆ ಹೋದಾಗ, ಮಿಶ್ರಾ ತಪ್ಪಿಸಿಕೊಳ್ಳಲು ಕಾರನ್ನು ಓಡಿಸಿದ್ದಾರೆ ಎನ್ನಲಾಗಿದೆ.ಕಾರು ಢಿಕ್ಕಿಯಾಗಿ ಮಿಶ್ರಾ ಅವರ ಪತ್ನಿ ಗಾಯಗೊಂಡಿದ್ದಾರೆ ಮತ್ತು ತಲೆಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಘಟನೆಯ ನಂತರ ಚಿತ್ರ ನಿರ್ಮಾಪಕರ ಪತ್ನಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next