67ನೇ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮವು ಶನಿವಾರ (ಅ.09) ನಡೆಯಲಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರದ ಜೊತೆಗೆ ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಕೃತಿ ಶೆಟ್ಟಿ, ಸಾನಿಯಾ ಐಯಪ್ಪನ್ ಮತ್ತು ಐಂದ್ರಿತಾ ರೇ ಮುಂತಾದ ಚೆಲುವೆಯರು ಹೆಜ್ಜೆ ಹಾಕಲಿದ್ದಾರೆ.
ಪ್ರತಿಷ್ಠಿತ ಫಿಲ್ಮ್ ಫೇರ್ ಅವಾರ್ಡ್ ಹಲವು ದಶಕಗಳಿಂದ ನಡೆದು ಬರುತ್ತಲೇ ಇದೆ. ಆದರೆ ಕರ್ನಾಟಕದಲ್ಲಿ ಈ ಕಾರ್ಯಕ್ರಮ ನಡೆದಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಫಿಲ್ಮ್ ಫೇರ್ ಕಾರ್ಯಕ್ರಮ ನಡೆಯುತ್ತಿದೆ.
ಫಿಲ್ಮ್ ಫೇರ್ ಅವಾರ್ಡ್ ಗೆ ಕನ್ನಡ ನಾಮಿನೇಶನ್ ಗಳು
ಅತ್ಯುತ್ತಮ ಚಿತ್ರ
ಆಕ್ಟ್ 1978
ದಿಯಾ
ಗರುಡ ಗಮನ ವೃಷಭ ವಾಹನ
ಶಿವಾಜಿ ಸುರತ್ಕಲ್
ಬಡವ ರಾಸ್ಕಲ್
ಸಲಗ
ಅತ್ಯುತ್ತಮ ನಿರ್ದೇಶಕ
ಮನ್ಸೋರೆ (ಆಕ್ಟ್ 1978)
ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್)
ದುನಿಯಾ ವಿಜಯ್ (ಸಲಗ)
ಕೃಷ್ಣ (ಲವ್ ಮಾಕ್ಟೇಲ್)
ಶಂಕರ ಗುರು (ಬಡವ ರಾಸ್ಕಲ್)
ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಜಡೇಶ್ ಕುಮಾರ್ ಹಂಪಿ (ಜಂಟಲ್ ಮ್ಯಾನ್)
ಇದನ್ನೂ ಓದಿ:ಅ.25: ದೀಪಾವಳಿ ದಿನ ಈ ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣ; ಭಾರತದಲ್ಲೂ ಗೋಚರ
ಅತ್ಯುತ್ತಮ ನಟ
ಧನಂಜಯ್ (ಬಡವ ರಾಸ್ಕಲ್)
ರಮೇಶ್ ಅರವಿಂದ್ (ಶಿವಾಜಿ ಸುರತ್ಕಲ್)
ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ರಿಷಭ್ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಕೃಷ್ಣ (ಲವ್ ಮಾಕ್ಟೇಲ್)
ಪ್ರಜ್ವಲ್ ದೇವರಾಜ್ (ಜಂಟಲ್ ಮ್ಯಾನ್)
ದರ್ಶನ್ (ರಾಬರ್ಟ್)
ಅತ್ಯುತ್ತಮ ನಟಿ
ಯಜ್ಞ ಶೆಟ್ಟಿ (ಆಕ್ಟ್ 1978)
ಮಿಲನಾ ನಾಗರಾಜ್ (ಲವ್ ಮಾಕ್ಟೇಲ್)
ಖುಷಿ ರವಿ (ದಿಯಾ)
ಅಮೃತ ಅಯ್ಯಂಗಾರ್ (ಬಡವ ರಾಸ್ಕಲ್)
ಆಶಾ ಭಟ್ (ರಾಬರ್ಟ್)
ರೆಬಾ ಮೋನಿಕಾ ಜಾನ್ (ರತ್ನನ್ ಪ್ರಪಂಚ)
ಆರೋಹಿ ನಾರಾಯಣ (ಭೀಮಸೇನ ನಳಮಹಾರಾಜ)
ಅತ್ಯುತ್ತಮ ಪೋಷಕ ನಟ
ನಾಗಭೂಷಣ (ಬಡವ ರಾಸ್ಕಲ್)
ಪ್ರಮೋದ್ ಪಂಜು (ರತ್ನನ್ ಪ್ರಪಂಚ)
ಸಂಚಾರಿ ವಿಜಯ್ (ಜಂಟಲ್ ಮ್ಯಾನ್)
ಬಿ.ಸುರೇಶ (ಆಕ್ಟ್ 1978)
ಧನಂಜಯ (ಸಲಗ)
ಬಾಲಾಜಿ ಮನೋಹರ್ (ಅಮೃತ್ ಅಪಾರ್ಟ್‌ಮೆಂಟ್)
ಅಚ್ಯುತ್ ಕುಮಾರ್ (ಭೀಮಸೇನ ನಳಮಹಾರಾಜ)
ಅತ್ಯುತ್ತಮ ಪೋಷಕ ನಟಿ
ಅಮೃತ ಅಯ್ಯಂಗಾರ್ (ಲಲ್ ಮಾಕ್ಟೇಲ್)
ಆರೋಹಿ ನಾರಾಯಣ (ಶಿವಾಜಿ ಸುರತ್ಕಲ್)
ಉಮಾಶ್ರೀ (ರತ್ನನ್ ಪ್ರಪಂಚ)
ಮೇಘಶ್ರೀ (ಮುಗಿಲುಪೇಟೆ)
ಉಷಾ ರವಿಶಂಕರ್ (ಸಲಗ)
ಸ್ಪರ್ಶ ರೇಖಾ (ಪಾಪ್‌ಕಾರ್ನ್ ಮಂಕಿ ಟೈಗರ್)
ಅತ್ಯುತ್ತಮ ಸಂಗೀತ ಆಲ್ಬಮ್
ಚರಣ್ ರಾಜ್ (ಸಲಗ)
ಬಿ ಅಜನೀಶ್ ಲೋಕನಾಥ್ (ಜಂಟಲ್ ಮ್ಯಾನ್)
ಶ್ರೀಧರ್ ವಿ ಸಂಭ್ರಮ (ಮುಗಿಲುಪೇಟೆ)
ಅರ್ಜುನ್ ಜನ್ಯ ಮತ್ತು ವಿ ಹರಿಕೃಷ್ಣ (ರಾಬರ್ಟ್)
ವಾಸುಕಿ ವೈಭವ್ (ಬಡವ ರಾಸ್ಕಲ್)
ರಘು ದೀಕ್ಷಿತ್ (ಲವ್ ಮಾಕ್ಟೇಲ್)
ಅತ್ಯುತ್ತಮ ಸಾಹಿತ್ಯ
ಕವಿರಾಜ್- ಮೆಲ್ಲನೆ (ರೈಡರ್)
ವಿ ನಾಗೇಂದ್ರ ಪ್ರಸಾದ್- ಧೀರ ಸಮ್ಮೋಹಗಾರ (ಬಿಚ್ಚುಗತ್ತಿ)
ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978)
ನಾಗಾರ್ಜುನ್ ಶರ್ಮಾ- ಮಳೆಯೇ ಮಳೆ (ಸಲಗ)
ಧನಂಜಯ- ಉಡುಪಿ ಹೊಟೇಲು (ಬಡವ ರಾಸ್ಕಲ್)
ಪ್ರಮೋದ್ ಮರವಂತೆ- ದೂರ ಹೋಗೋ ಮುನ್ನಾ (ಮುಗಿಲುಪೇಟೆ)
ಅತ್ಯುತ್ತಮ ಹಿನ್ನೆಲೆ ಗಾಯಕ
ರಘು ದೀಕ್ಷಿತ್- ಮಳೆ ಮಳೆ ಮಳೆ (ನಿನ್ನ ಸನಿಹಕೆ)
ನಕುಲ್ ಅಭ್ಯಂಕರ್- ತಾರೀಫು ಮಾಡೋಳು (ಮುಗಿಲುಪೇಟೆ)
ಕಡಬಗೆರೆ ಮುನಿರಾಜು- ತೇಲಾಡು ಮುಗಿಲು (ಆಕ್ಟ್ 1978)
ಸಂಜಿತ್ ಹೆಗ್ಡೆ- ಮೆಲ್ಲನೆ (ರೈಡರ್)
ವಿಜಯ್ ಪ್ರಕಾಶ್- ಉಡುಪಿ ಹೊಟೇಲು (ಬಡವ ರಾಸ್ಕಲ್)
ಸಿದ್ ಶ್ರೀರಾಮ್-ಹಾಯಾಗಿದೆ (ಟಾಮ್ ಅಂಡ್ ಜೆರ್ರಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ
ಶ್ವೇತಾ ದೇವನಹಳ್ಳಿ- ತಾರೀಫು ಮಾಡೋಳು (ಮುಗಿಲಪೇಟೆ)
ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗಟ್ಟಿ)
ಚಿನ್ಮಯಿ ಶ್ರೀಪಾದ- ಹಾಯಾದ ಹಾಯಾದ (ದಿಯಾ)
ಶ್ರುತಿ ವಿಎಸ್- ಲವ್ ಯೂ ಚಿನ್ನಾ (ಲವ್ ಮಾಕ್ಟೇಲ್)
ಐಶ್ವರ್ಯ ರಂಗರಾಜನ್- ಮಳೆಯೇ ಮಳೆ (ಸಲಗ)
ಶ್ರೇಯಾ ಘೋಷಾಲ್- ಕಣ್ಣು ಹೊಡಿಯಾಕ (ರಾಬರ್ಟ್)