ಮುಂಬಯಿ : ತನ್ನ ಪತ್ನಿಯ ಮೇಲೆ ಕಾರು ಹರಿಸಲು ಯತ್ನಿಸಿದ ಆರೋಪದ ಮೇಲೆ ಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಅವರನ್ನು ಮುಂಬಯಿ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಘಟನೆಯು ಅಕ್ಟೋಬರ್ 19 ರಂದು ಸಬ್ಅರ್ಬನ್ ಅಂಧೇರಿ(ಪಶ್ಚಿಮ)ದ ವಸತಿ ಕಟ್ಟಡದ ಪ್ರದೇಶದಲ್ಲಿ ನಡೆದಿದ್ದು. ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಪರಸ್ತ್ರೀಯೊಂದಿಗೆ ಇದ್ದ ವೇಳೆ ಪತ್ನಿಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದು, ಈ ಸಂದರ್ಭ ಕಾರಿಗೆ ಅಡ್ಡ ಬಂದ ಪತ್ನಿಯ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾರೆ, ಈ ಘಟನೆಯ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು, ಕಾರು ಹರಿದು ಕಮಲ್ ಮಿಶ್ರಾ ಪತ್ನಿ ಗಾಯಗೊಂಡಿದ್ದರು. ಈ ಕುರಿತು ಪತಿ ಕಮಲ್ ಕಿಶೋರ್ ವಿರುದ್ಧ ಪತ್ನಿ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಮುಂಬಯಿ ಪೊಲೀಸರು ಗುರುವಾರ ರಾತ್ರಿ ಕಮಲ್ ಕಿಶೋರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ನ್ಯೂಯಾರ್ಕ್ ನಲ್ಲಿ ಭೀಕರ ರಸ್ತೆ ಅಪಘಾತ : ಭಾರತದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು