Advertisement
ಸೆ. 30ರಂದು ನೀಡಿರುವ ಈ ದೂರು ಶನಿವಾರ ಬೆಳಕಿಗೆ ಬಂದಿದೆ. ಬೆಳಗಾವಿಯವರು ಆಗಿರುವ ಕಲ್ಯಾಣ್ ಅವರ ಪತ್ನಿ ಅಶ್ವಿನಿ ಇಲ್ಲಿನ ಮಹಾಂತೇಶ ನಗರದಲ್ಲಿ ವಾಸವಿದ್ದಾರೆ. ಆರೋಪಿ ಗಂಗಾ ಅವರು ಕಲ್ಯಾಣ್ ಮನೆ ಯಲ್ಲಿ ಅಡುಗೆ ಕೆಲಸಕ್ಕೆಂದು ಸೇರಿಕೊಂಡಿದ್ದರು. ಕುಟುಂಬದವರ ಸ್ನೇಹ ಬೆಳೆಸಿದ್ದರು. ಶಿವಾನಂದನನ್ನೂ ಪರಿಚಯಿಸಿದ್ದರು. ಅವರಿಬ್ಬರೂ ಸೇರಿ ಪತ್ನಿ ಅಶ್ವಿನಿ, ಅತ್ತೆ ರಾಧಿಕಾ ಸಾತ್ವಿಕ್ ಹಾಗೂ ಮಾವ ಕೃಷ್ಣ ಸಾತ್ವಿಕ್ ಅವರನ್ನು ಪುಸಲಾಯಿಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಇನ್ನೊಂದೆಡೆ ಕಲ್ಯಾಣ್ ಅವರ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯಾ ಅವರು ವಿಚ್ಛೇದನ ಕೋರಿ ಜೂನ್ 26ರಂದು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಶ್ವಿನಿ ಪರ ವಕೀಲ ಸತೀಶ್ ದಳವಾಯಿ ಹೇಳಿದ್ದಾರೆ. ಕಲ್ಯಾಣ್ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ತನಗೆ ಅವರಿಂದ ವಿಚ್ಛೇದನ ಬೇಕು ಎಂದು ಅಶ್ವಿನಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಪತಿ ವಿರುದ್ಧ ಮಾಳಮಾರುತಿ ಠಾಣೆಗೆ ದೂರು ಸಹ ನೀಡಿದ್ದಾರೆ. ಜೂನ್‌ನಲ್ಲಿ ದೂರು ನೀಡಿದ್ದರೂ ಇದುವರೆಗೆ ಪೊಲೀಸರು ವಿಚಾರಣೆ ನಡೆಸಿಲ್ಲ. ಆದರೆ ಕಲ್ಯಾಣ್ ನೀಡಿದ್ದ ದೂರನ್ನು ಸ್ವೀಕರಿಸಿ ತನಿಖೆ ಆರಂಭಿಸಿದ್ದಾರೆ ಎಂದು ಸತೀಶ್ ದಳವಾಯಿ ದೂರಿದ್ದಾರೆ.