ಹಾಗೂ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಿಜೆಪಿಯ ಅಪ್ಪಚ್ಚು ರಂಜನ್ ಪ್ರಶ್ನೆಗೆ ಉತ್ತರಿಸಿದ ಅವರು, 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಬಕಾರಿ ಉಪ ಅಧೀಕ್ಷಕರ 6 ಹುದ್ದೆಗಳಿಗೆ ಕೆಪಿಎಸ್‌ಸಿ ಅಂತಿಮ ಆಯ್ಕೆ ಪಟ್ಟಿ ಹೊರಡಿಸಿತ್ತು. ತಕರಾರಿನ ಹಿನ್ನೆಲೆಯಲ್ಲಿ
ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಅಂತಿಮ ತೀರ್ಮಾನ ನಿರೀಕ್ಷಿಸಲಾಗಿದೆ. 2017ರ ಸಾಲಿನ ಗೆಜೆಟೆಡ್ ಪ್ರೊಬೆಷನರ್
ನೇಮಕಾತಿ ಪ್ರಕ್ರಿಯೆಯಲ್ಲಿ ಅಬಕಾರಿ ಉಪನಿರೀಕ್ಷಕರ 5 ಹುದ್ದೆಗಳಿಗೆ ಆಯೋಗ ಲಿಖೀತ ಪರೀಕ್ಷೆ ನಡೆಸಿದೆ ಎಂದು ಮಾಹಿತಿ ನೀಡಿದರು.
Advertisement
ಅಬಕಾರಿ ಉಪ ನಿರೀಕ್ಷಕರ 177 ಹುದ್ದೆಗಳಿಗೆ ಆಯೋಗ ತಾತ್ಕಾಲಿಕ ಪಟ್ಟಿ ಪ್ರಕಟಿಸಿ 59 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಹೊರಡಿಸಿದೆ. ಅಬಕಾರಿ ಆರಕ್ಷಕರ 1003 ಹುದ್ದೆಗಳಿಗೆ ಆಯೋಗ ತಾತ್ಕಾಲಿಕ ಪಟ್ಟಿ ಪ್ರಕಟಿಸಿದೆ. ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ
ನೇತೃತ್ವದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಮೂಲಕ ವಾಹನ ಚಾಲಕರ ವೃಂದದಲ್ಲಿ ಖಾಲಿಯಿರುವ 183 ಹುದ್ದೆಗಳನ್ನು ನೇರ
ನೇಮಕಾತಿ ಮೂಲಕ ಭರ್ತಿ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ. ಬಿ.ಕೆ.ಪವಿತ್ರಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದಿನ
ನಿರ್ದೇಶನದವರೆಗೆ ಮುಂಬಡ್ತಿ/ಹಿಂಬಡ್ತಿ ಪ್ರಕ್ರಿಯೆ ಜರುಗಿಸದೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಲಾಗಿದೆ. ಆ ಹಿನ್ನೆಲೆಯಲ್ಲಿ
ಮುಂಬಡ್ತಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಇಲಾಖೆಗೆ ಹೆಚ್ಚು ಆದಾಯ ಸಂಗ್ರಹದಲ್ಲಿ ನೆರವಾಗುವ ಅಬಕಾರಿ ಆರಕ್ಷಕರಿಗೆ 25, 30 ವರ್ಷ ಸೇವಾವಧಿ ಪೂರ್ಣಗೊಳಿಸಿದರೂ ಬಡ್ತಿ ನೀಡದಿರುವ ಬಗ್ಗೆ
ಪ್ರಸ್ತಾಪಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ರಾಜ್ಯದಲ್ಲಿ ಮದ್ಯ ನಿಷೇಧಿಸುವ ಚಿಂತನೆ ಸರ್ಕಾರಕ್ಕಿದೆಯೇ ಎಂದು ಬಿಜೆಪಿಯ ಅಪ್ಪಚ್ಚು ರಂಜನ್ ಕೇಳಿದಾಗ ಸಭಾಧ್ಯಕ್ಷ
ಕೆ.ಆರ್.ರಮೇಶ್ ಕುಮಾರ್, ಈ ಬಗ್ಗೆ ಸಂಜೆ ಕುಳಿತು ಚರ್ಚಿಸೋಣ ಎಂದು ಹಾಸ್ಯಚಟಾಕಿ ಹಾರಿಸಿದರು. ಇದಕ್ಕೆ ದನಿಗೂಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾವಿಮ, ಅಪ್ಪಚ್ಚು ರಂಜನ್ ಅವರ ಮಾತನ್ನು ಮಡಿಕೇರಿಯವರು ಕೇಳಿಸಿಕೊಂಡರೆ ಅವರಿಗೆ ತೊಂದರೆಯಾಗಬಹುದು ಎಂದು ಲಘು ಧಾಟಿಯಲ್ಲಿ ಹೇಳಿದರು.