Advertisement

ಎಫ್ಐಎಚ್‌ ಹಾಕಿ ವಿಶ್ವಕಪ್‌: ಹರ್ಮನ್‌ಪ್ರೀತ್‌ ಭಾರತ ತಂಡದ ನಾಯಕ

10:36 PM Dec 23, 2022 | Team Udayavani |

ಹೊಸದಿಲ್ಲಿ: ಮುಂಬರುವ ಎಫ್ಐಎಚ್‌ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ 18 ಸದಸ್ಯರ ಭಾರತೀಯ ತಂಡದ ನಾಯಕರನ್ನಾಗಿ ಡಿಫೆಂಡರ್‌ ಹರ್ಮನ್‌ಪ್ರೀತ್‌ ಸಿಂಗ್‌ ಅವರನ್ನು ಹೆಸರಿಸಲಾಗಿದೆ. ಈ ವಿಶ್ವಕಪ್‌ ಒಡಿಶಾದಲ್ಲಿ ಜ. 13ರಿಂದ ಆರಂಭವಾಗಲಿದೆ.

Advertisement

ಡಿಫೆಂಡರ್‌ ಅಮಿತ್‌ ರೋಹಿದಾಸ್‌ ಅವರು ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹರ್ಮನ್‌ಪ್ರೀತ್‌ ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ನಡೆದ ಹಾಕಿ ಸರಣಿ ವೇಳೆ ತಂಡವನ್ನು ಮುನ್ನಡೆಸಿದ್ದರು. ಈ ಸರಣಿಯಲ್ಲಿ ಭಾರತ ಪ್ರಬಲ ಹೋರಾಟ ಸಂಘಟಿಸಿ ದ್ದರೂ ಐದು ಪಂದ್ಯಗಳ ಸರಣಿಯನ್ನು 1-4 ಅಂತರದಿಂದ ಸೋತಿತ್ತು.

ಮಿಡ್‌ಫಿಲ್ಡರ್‌ ಮನ್‌ಪ್ರೀತ್‌ ಸಿಂಗ್‌ ನಾಯಕತ್ವದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಭಾರತೀಯ ತಂಡವು ಐತಿಹಾಸಿಕ ಕಂಚಿನ ಪದಕ ಜಯಿಸಲು ಯಶಸ್ವಿಯಾಗಿತ್ತು. ಆದರೆ ಅವರೀಗ ಆಟಗಾರರಾಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ಆಟಗಾರರಿಗೆ ನಾಯಕತ್ವದ ಜವಾಬ್ದಾರಿ ತಿಳಿಯಬೇಕೆಂಬ ಕೋಜ್‌ ಗ್ರಹಾಂ ರೈಡ್‌ ಅವರ ಅಭಿಲಾಷೆಯಂತೆ ಬೇರೆ ಬೇರೆ ಆಟಗಾರರಿಗೆ ಕೆಲವು ಸಮಯದ ಅವಧಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗುತ್ತಿದೆ. ಈ ಹಿಂದೆ ರೋಹಿದಾಸ್‌ ಕೂಡ ತಂಡ ವನ್ನು ಮುನ್ನಡೆಸಿದ್ದರು.

ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಎರಡು ದಿನಗಳ ತರಬೇತಿ ಶಿಬಿರದ ಬಳಿಕ ವಿಶ್ವಕಪ್‌ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಶಿಬಿರದಲ್ಲಿ ಒಟ್ಟಾರೆ 33 ಆಟಗಾರರು ಪಾಲ್ಗೊಂಡಿದ್ದರು. ಅನುಭವಿ ಯುವ ಆಟಗಾರರನ್ನು ಒಳಗೊಂಡ ಈ ತಂಡವು ವಿಶ್ವಕಪ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಮಾಡಲಾಗಿದೆ.

ಟೋಕಿಯೊ ಒಲಿಂಪಿಕ್ಸ್‌ ತಂಡದ ಲ್ಲಿದ್ದ ಗುರ್ಜಾಂತ್‌ ಸಿಂಗ್‌ ಮತ್ತು ದಿಲ್‌ಪ್ರೀತ್‌ ಸಿಂಗ್‌ ವಿಶ್ವಕಪ್‌ನ ಮುಖ್ಯ ತಂಡದಲ್ಲಿ ಇಲ್ಲ. ಆದರೆ ಅವರಿ ಬ್ಬರು ಮೀಸಲು ಆಟಗಾರರಾಗಿ ತಂಡದಲ್ಲಿ ಇರಲಿದ್ದಾರೆ. ಆಟಗಾರರ ನಿರ್ವ ಹಣೆ ಮತ್ತು ಸದ್ಯದ ಫಾರ್ಮ್ನ ಆಧಾರ ದಲ್ಲಿ ಆಟಗಾರರನ್ನು ಆಯ್ಕೆ ಮಾಡ ಲಾಗಿದೆ ಎಂದು ಹಾಕಿ ಇಂಡಿಯಾ ಆಯ್ಕೆಗಾರರೊಬ್ಬರು ಹೇಳಿದ್ದಾರೆ.

Advertisement

ಸ್ಪೇನ್‌ ಮೊದಲ ಎದುರಾಳಿ
ನೂತನವಾಗಿ ನಿರ್ಮಿಸಲಾದ ಬಿರ್ಸಾ ಮುಂಡ ಹಾಕಿ ಕ್ರೀಡಾಂಗಣ ದಲ್ಲಿ ಜ. 13ರಂದು ಸ್ಪೇನ್‌ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಭಾರತವು ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. “ಡಿ’ ಬಣದ ದ್ವಿತೀಯ ಪಂದ್ಯದಲ್ಲಿ ಭಾರತವು ಇಂಗ್ಲೆಐಂಡ್‌ ವಿರುದ್ಧ ಆಡಲಿದೆ. ವೇಲ್ಸ್‌ ವಿರುದ್ಧದ ಪಂದ್ಯ ಭುವನೇಶ್ವರದಲ್ಲಿ ನಡೆಯಲಿದೆ. ನಾಕೌಟ್‌ ಹಂತದ ಪಂದ್ಯಗಳು ಜ. 22 ಮತ್ತು 23ರಂದು ನಡೆಯಲಿದ್ದು ಜ. 25ರಂದು ಕ್ವಾರ್ಟರ್‌ಫೈನಲ್ಸ್‌ ಮತ್ತು ಜ. 27ರಂದು ಸೆಮಿಫೈನಲ್ಸ್‌ ನಡೆಯಲಿದೆ. ಕಂಚಿನ ಪದಕ ಮತ್ತು ಫೈನಲ್‌ ಪಂದ್ಯವು ಜ. 29ರಂದು ಜರಗಲಿದೆ.

ಎಲ್ಲ ಮುಖ್ಯಮಂತ್ರಿಗಳಿಗೆ ಆಹ್ವಾನ
ಭುವನೇಶ್ವರ: ಮುಂಬರುವ ಪುರುಷರ ಹಾಕಿ ವಿಶ್ವಕಪ್‌ ವೇಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಹೇಳಿದ್ದಾರೆ.

ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪಟ್ನಾಯಕ್‌ ಈ ವಿಷಯವನ್ನು ಪ್ರಕಟಿಸಿದರು. ಬಿಜೆಡಿ, ವಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್‌, ಸಿಪಿಐ (ಎಂ), ಸಿಪಿಐ, ಸಮಾಜವಾದಿ ಪಕ್ಷ, ಆರ್‌ಜೆಡಿ ತಮು¤ ಎಎಪಿಯ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಅಂತಾರಾಷ್ಟ್ರೀಯ ಕೂಟವು ಸುಗಮವಾಗಿ ಸಾಗಲು ಎಲ್ಲ ರಾಜಕೀಯ ಪಕ್ಷಗಳ ಸಹಕಾರ ನೀಡುವ ಅಗತ್ಯವಿದೆ ಎಂದು ಹೇಳಿದ ಪಟ್ನಾಯಕ್‌ ವಿಶ್ವಕಪ್‌ನ ಪಂದ್ಯಗಳನ್ನು ವೀಕ್ಷಿಸಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಈ ಕೂಟದ ಆಯೋಜನೆಗೆ ಕೇಂದ್ರ ಸರಕಾರದಿಂದ ಸಾಧ್ಯವಿರುವ ಎಲ್ಲ ಸಹಕಾರ, ಬೆಂಬಲ ನೀಡಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next