Advertisement

ಅಂಕಿ ಅಂಶಗಳು ಯೋಜನೆಗಳ ಅನನ್ಯ ಭಾಗ

04:29 PM Jul 28, 2022 | Team Udayavani |

ಹುಬ್ಬಳ್ಳಿ: ಪರಿಕಲ್ಪನೆಗಳ ತಿಳಿವಳಿಕೆ, ಅಂಕಿ-ಸಂಖ್ಯೆಗಳ ಮಾಹಿತಿ(ಡೇಟಾ)ಯ ಗುಣಮಟ್ಟವು ಸಮೀಕ್ಷೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಷ್ಟ್ರೀಯ ಸಾಂಖೀÂಕ ಕಾರ್ಯಾಲಯದ (ಎನ್‌ಎಸ್‌ಒ) ವಲಯ ಕಚೇರಿಯ ಉಪ ಮಹಾನಿರ್ದೇಶಕ ಸಾಜಿ ಜಾರ್ಜ್‌ ಹೇಳಿದರು.

Advertisement

ಗೃಹ ಬಳಕೆಯ ವೆಚ್ಚದ ಸಮೀಕ್ಷೆ ಕುರಿತು ಬುಧವಾರದಿಂದ ಮೂರು ದಿನಗಳ ಕಾಲ ಪ್ರಾದೇಶಿಕ ಕಚೇರಿ ನೌಕರಿಗಾಗಿ ಇಲ್ಲಿನ ವಿದ್ಯಾನಗರ ಭಾಗ್ಯಲಕ್ಷ್ಮಿನಗರದ ಎನ್‌ಎಸ್‌ ಎಸ್‌ಒ ಭವನದಲ್ಲಿ ಆಯೋಜಿಸಿರುವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಚಟುವಟಿಕೆಗಳು ಸರಾಗವಾಗಿ ಸಾಗಲು ಗುಣಮಟ್ಟದ ಅಂಕಿ ಅಂಶಗಳನ್ನು ಒದಗಿಸುವುದು ಭಾರತ ಸರಕಾರದ ಅಂಕಿಅಂಶ ಯೋಜನಾ ಅನುಷ್ಠಾನ ಸಚಿವಾಲಯದ ಪ್ರಮುಖ ಕರ್ತವ್ಯ. ಅಂಕಿ ಅಂಶಗಳು ಯೋಜನೆಗಳ ಅನನ್ಯ ಭಾಗ. ಆದರೆ ನಿಖರತೆ, ಸಮಯ ಪಾಲನೆ ಹಾಗೂ ಗುಣಮಟ್ಟಗಳಿಂದ ಕೂಡಿದ ಅಂಕಿ ಅಂಶಗಳು ಇಂದಿನ ಅಗತ್ಯ. ಸಮೀಕ್ಷೆಯ ಯಶಸ್ಸು ಅಧಿಕಾರಿಗಳ ತಾಂತ್ರಿಕ ನೈಪುಣ್ಯತೆ, ಸಂವಹನ ಕೌಶಲ, ಸಾರ್ವಜನಿಕರ ಸಹಕಾರ ಅವಲಂಬಿಸಿದೆ ಎಂದರು.

ಎನ್‌ಎಸ್‌ಒ ಇದುವರೆಗೆ ಒಟ್ಟು 78 ಸುತ್ತು ಸಮೀಕ್ಷೆ ಮಾಡಿದೆ. ಸರಕಾರ 2011-12ರ 62ನೇ ಸುತ್ತು ಪ್ರಕಟಿಸಿದ್ದು, 2017-18ರ ಸಮೀಕ್ಷೆ ಪ್ರಕಟಿಸಿಲ್ಲ. ಈ ಬಾರಿ ಪ್ರತ್ಯೇಕವಾಗಿ ಸಮೀಕ್ಷೆ ಮಾಡಲಾಗುತ್ತಿದೆ. ಪ್ರತಿ ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಲಾಗುವುದು. ಈ ವೇಳೆ ವಿಭಿನ್ನ ವಿಧಾನ ಬಳಸಲಾಗುವುದು. ವಿವಿಧ ವಸ್ತುಗಳ ಮೇಲೆ ಮನೆಯ ಬಳಕೆ ಮತ್ತು ವೆಚ್ಚ ನಿರ್ಧರಿಸುವುದು. ಸಂಪೂರ್ಣ ಸೆಟ್‌ ಬಳಕೆಯ ಮಾಹಿತಿಯನ್ನು ಮೂರು ವಿಭಿನ್ನ ಪ್ರಶ್ನಾವಳಿಗಳ (ಎಫ್‌ಡಿಕ್ಯೂ, ಸಿಎಸ್‌ಕ್ಯೂ, ಡಿಜಿಕ್ಯೂ)ಮೂಲಕ ಸಂಗ್ರಹಿಸಲಾಗುತ್ತದೆ.

ಮನೆಗಳ ಪಟ್ಟಿ ಮಾಡಿ 18 ಮಾದರಿ ಮನೆಗಳನ್ನು ಆಯ್ಕೆ ಮಾಡಲಾಗುತ್ತದೆ. ಇನ್ನೆರಡು ತಿಂಗಳಲ್ಲಿ ಒಂದೇ ಮನೆಯಿಂದ ಇನ್ನೆರಡು ಪ್ರಶ್ನಾವಳಿಗಳನ್ನು ಪೂರ್ಣಗೊಳಿಸಲಾಗುತ್ತದೆ. ಒಂದು ತಿಂಗಳಲ್ಲಿ ಸಮಾನ ಸಂಖ್ಯೆಯ ಮಾದರಿ ಎಫ್‌ಎಸ್‌ಯು ಆಯ್ಕೆ ಮಾಡಲಾಗುತ್ತದೆ. ಅಲ್ಲಿ ಪ್ರತಿ ಮಾದರಿ ಎಫ್‌ಎಸ್‌ಯು ಮತ್ತು ಪ್ರತಿ ಮಾದರಿ ಕುಟುಂಬವನ್ನು ಮೂರು ತಿಂಗಳ ಅವಧಿಯಲ್ಲಿ ಮೂರು ಬಾರಿ ಭೇಟಿ ಮಾಡಲಾಗುತ್ತದೆ. ಸಮೀಕ್ಷೆ ವೇಳೆ ಆಹಾರ ಖರ್ಚಿನ ಬಗ್ಗೆ ಹೆಚ್ಚು ಒತ್ತು ಕೊಡಲಾಗುವುದು. ಸಿಎಪಿಐ ಸಾಫ್ಟ್‌ವೇರ್‌ನಲ್ಲಿ ಡೇಟಾ ಸಂಗ್ರಹಿಸಲಾಗುತ್ತದೆ ಎಂದರು.

Advertisement

ತಾಂತ್ರಿಕತೆಯ ಉಪಯೋಗ ಮೂಲಕ ತ್ವರಿತ, ನಿಖರ ಹಾಗೂ ಗುಣಮಟ್ಟದ ಸಮೀûಾ ಫಲಿತಾಂಶಗಳನ್ನು ನೀಡುವ ಮೂಲಕ ಗ್ರಾಹಕರ ಬೆಲೆ ಸೂಚ್ಯಂಕ, ಜಿಡಿಪಿ ಇತ್ಯಾದಿಗಳಿಗೆ ಅಗತ್ಯ ಫಲಿತಾಂಶ ಕಲ್ಪಿಸಲಾಗುವುದು. ಈ ಮೂರು ದಿನಗಳ ಕಾರ್ಯಾಗಾರವು ಸಿದ್ಧಾಂತ, ವ್ಯಾಖ್ಯಾನಗಳ ಏಕರೂಪದ ಅರಿವಿಗೆ ಅನುಕೂಲವಾಗುವಂತೆ ಭಾಗವಹಿಸಬೇಕು. ಇದು ಜುಲೈದಿಂದ ಆರಂಭವಾಗಲಿದ್ದು, 3-4 ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ಎಂದರು.

ಕಾರ್ಯಾಗಾರದಲ್ಲಿ ಹುಬ್ಬಳ್ಳಿ ಪ್ರಾಂತೀಯ ಕಾರ್ಯಾಲಯ, ಉಪ ಪ್ರಾಂತೀಯ ಕಾರ್ಯಾಲಯಗಳಾದ ಬಳ್ಳಾರಿ, ಬೆಳಗಾವಿ, ಕಲಬುರ್ಗಿಯ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 75ಕ್ಕೂ ಹೆಚ್ಚು ಕ್ಷೇತ್ರ ಅಧಿಕಾರಿಗಳು ಭಾಗವಹಿಸಿದ್ದರು.

ಹಿರಿಯ ಅಂಕಿ ಅಂಶ ಅಧಿಕಾರಿ ಪ್ರಮೋದ ಪಂಡಿತ ಮೊದಲಾದವರಿದ್ದರು. ಉಪ ನಿರ್ದೇಶಕಿ, ಪ್ರಾದೇಶಿಕ ಮುಖ್ಯಸ್ಥೆ ಸುಗಂಧಾ ಶ್ರೀವಾಸ್ತವ ಸ್ವಾಗತಿಸಿದರು. ರಿತು ಖಂಡಾರೆ ನಿರೂಪಿಸಿದರು. ಉಪ ನಿರ್ದೇಶಕ ವಿನೀಷ ಪಿ.ಪಿ.ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next