Advertisement

ನಿವೇಶನ ಹಕ್ಕು ಪತ್ರಕ್ಕಾಗಿ ಹೋರಾಟ: 5 ಕೋಟಿ ಜನರಿಗೆ ಸ್ವಂತ ಭೂಮಿ ಇಲ್ಲ

03:02 PM Mar 09, 2017 | Team Udayavani |

ಕುಂದಾಪುರ: ಗ್ರಾಮೀಣ ಭಾರತದಲ್ಲಿ  ಸುಮಾರು 2 ಕೋಟಿ ಕುಟುಂಬಕ್ಕೆ ಸ್ವಂತ ಮನೆ ಇಲ್ಲ, ಸುಮಾರು 5 ಕೋಟಿ ಜನರಿಗೆ ಸ್ವಂತ ಭೂಮಿ ಇಲ್ಲ – ತುಂಡು ಭೂಮಿ ಇಲ್ಲದ ಬಡಜನರ ಸಮಸ್ಯೆ ಪರಿಹರಿಸಲು ಆಡಳಿತ ಮಾಡಿದ ಸರಕಾರಗಳಿಗೆ  ಈ ತನಕ ಸಾಧ್ಯವಾಗಿಲ್ಲ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಉಪಾಧ್ಯಕ್ಷ ರಾಜೀವ ಪಡುಕೋಣೆ ಆತಂಕ ವ್ಯಕ್ತಪಡಿಸಿದರು.

Advertisement

ಕಂಡೂರು ಶ್ರೀ ಭವಾನಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನೆ ನಿವೇಶನ ರಹಿತರಿಗೆ ಸರಕಾರಿ ಭೂಮಿ ಗುರುತಿಸಿ ಹಕ್ಕು ಪತ್ರ ಮಂಜೂರು ಮಾಡಲು ಒತ್ತಾಯಿಸುವುದಕ್ಕೆ ಎ. 11ರಂದು ಶಾಸಕರ ಮನೆ ಮುಂದೆ ಧರಣಿ ಸತ್ಯಾಗ್ರಹ ಹೋರಾಟದ ಪೂರ್ವಸಿದ್ಧತಾ ಸಭೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಯು. ದಾಸಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸಮಾವೇಶದಲ್ಲಿ ಮಾತನಾಡಿದರು. ನಾಗರತ್ನಾ  ನಾಡ, ಕುಶಲ, ಪದ್ಮಾವತಿ ಶೆಟ್ಟಿ, ಶೀಲಾವತಿ, ಸತೀಶ ಖಾರ್ವಿ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.  ಸ್ಥಳೀಯ ಮುಖಂಡ ಆನಂದ ಕುಲಾಲ್‌ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next