Advertisement

ಬಿಜೆಪಿ ಮುಖಂಡರ ವಿರುದ್ಧ ಹೋರಾಟಗಾರರ ಆಕ್ರೋಶ

06:30 AM Dec 27, 2017 | Team Udayavani |

ಬೆಂಗಳೂರು: ಬಿಜೆಪಿ ಕಚೇರಿ ಎದುರು ಧರಣಿ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರೊಂದಿಗೆ ಸಂಧಾನ ಯತ್ನ
ವಿಫ‌ಲವಾದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಬಿಜೆಪಿ ಮುಖಂಡರ ವಿರುದಟಛಿ ಮಹದಾಯಿ ಹೋರಾಟಗಾರರು ಹಿಡಿಶಾಪ ಹಾಕಿದರು.

Advertisement

“ಗೋವಾ ಸರ್ಕಾರವನ್ನು ನಾನು ಒಪ್ಪಿಸುತ್ತೇನೆ ಎಂದು ಹೇಳಿದ್ದೇ ಹೊರತು ಬೇರೆ ಯಾವುದೇ ಭರವಸೆಯನ್ನು ನಾನು ಕೊಟ್ಟಿರಲಿಲ್ಲ. ದಯಮಾಡಿ ಹೋರಾಟ ಹಿಂಪಡೆಯಿರಿ’ ಎಂದು ಯಡಿಯೂರಪ್ಪ ಮನವಿ ಮಾಡಿದರು. ಅದಕ್ಕೆ ಒಪ್ಪದ್ದಿದ್ದಾಗ ಯಡಿಯೂರಪ್ಪ ಅಲ್ಲಿಂದ ಹೊರಟರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಹಸಿರು ಶಾಲು ತೋರಿಸಿ ಬಿಜೆಪಿ ಮುಖಂಡರ ವಿರುದಟಛಿ ಘೋಷಣೆಗಳನ್ನು ಕೂಗಿದರು. ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು.

ಇದರಿಂದ ಮುಜುಗರಕ್ಕೊಳಗಾದ ಯಡಿಯೂರಪ್ಪ ಮತ್ತಿತರರು ಕೂಡಲೇ ಪಕ್ಷದ ಕಚೇರಿಗೆ ತೆರಳಿದರು.

ಮೂವರು ಮಹಿಳೆಯರು ಅಸ್ವಸ್ಥ: 4 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಸಂಚಾರ ದಟ್ಟಣೆ: ಸಂಜೆ 5 ಗಂಟೆ ಸುಮಾರಿಗೆ ಯಡಿಯೂರಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಚೇರಿ ಸುತ್ತ-ಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು. ಯಡಿಯೂರಪ್ಪ ಸೇರಿದಂತೆ ನಾಲ್ಕೈದು ಮಂದಿ ರಾಜಕೀಯ ನಾಯಕರು ಬಂದಿದ್ದರಿಂದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರು.

Advertisement

ಇದರಿಂದ ಸುಮಾರು 40 ನಿಮಿಷಗಳ ಕಾಲ ಬಿಜೆಪಿಯ ಕಚೇರಿ ಮುಂಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಪ್ರತಿಭಟನೆಗೆ ಭಾರೀ ಪೊಲೀಸ್‌ ಬಂದೋ ಬಸ್ತ್ ಮಾಡಲಾಗಿತ್ತು. ಇಬ್ಬರು ಡಿಸಿಪಿ, ಎಸಿಪಿ, 8 ಮಂದಿ ಇನ್‌ಸ್ಪೆಕ್ಚರ್‌ಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪೊಲೀಸ್‌ ಸಿಬ್ಬಂದಿ
ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next