Advertisement

ಥಿಯೇಟರ್‌ ಹೊರಗೆ ಘರ್ಷಣೆ;ತಮಿಳು ಚಿತ್ರ ನಿಷೇಧಿಸಲು ಪ್ರತಿಭಟನೆ 

04:41 PM Oct 19, 2017 | Team Udayavani |

ಬೆಂಗಳೂರು: ಖ್ಯಾತ  ತಮಿಳು ನಟ ಇಳಯ ದಳಪತಿ ವಿಜಯ್‌ ಅಭಿಮಾನಿಗಳು ಕನ್ನಡಿಗನೊಬ್ಬನಿಗೆ ಚಿತ್ರಮಂದಿರದಲ್ಲಿ ಥಳಿಸಿದ ಬಗ್ಗೆ  ಆರ್‌.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಳಿಕ ತಮಿಳು ಚಿತ್ರ ನಿಷೇಧಕ್ಕಾಗಿ ಕರವೇ ಪ್ರತಿಭಟನೆ ನಡೆಸುತ್ತಿದೆ. 

Advertisement

ವಿಜಯ್‌ ಅಭಿನಯದ ‘ಮೇರ್ಸಲ್‌’ಚಿತ್ರದ ಪ್ರದರ್ಶನ ಕಾಣುತ್ತಿದ್ದ ರಾಧಾಕೃಷ್ಣ ಚಿತ್ರಮಂದಿರದ ಬಳಿ ಬುಧವಾರ ಘಟನೆ ನಡೆದಿದ್ದು,ವಿಜಯ್‌ ಕಟೌಟ್‌ ಮೇಲೆ ಕುಳಿತಿರುವುದನ್ನು ಆಕ್ಷೇಪಿಸಿ ಅಭಿಮಾನಿಗಳು ಕನ್ನಡಿಗನಿಗೆ ಥಳಿಸಿದ್ದಾರೆ ಎನ್ನಲಾಗಿದೆ. 

ಘಟನೆ ನಡೆದ ಕೂಡಲೇ ಪ್ರವೀಣ್‌ ಶೆಟ್ಟಿ ಬಣದ ನೂರಾರು ಕರವೇ ಕಾರ್ಯಕರ್ತರು  ಚಿತ್ರಮಂದಿರದ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಚಿತ್ರ ಪ್ರದರ್ಶನ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. 

4 ಗಂಟೆಯ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವುದಾಗಿ ಚಿತ್ರಮಂದಿರದ ಮಾಲೀಕ ಹೇಳಿದ ಬಳಿಕವಷ್ಟೇ ಪ್ರತಿಭಟನೆ ಹಿಂಪಡೆದುಕೊಳ್ಳಲಾಗಿದೆ.

ಹತ್ತಕ್ಕೂ ಹೆಚ್ಚು ಉದ್ರಿಕ್ತರು ಥಳಿಸಿರುವುದಾಗಿ ವರದಿಯಾಗಿದ್ದು , ತಮಿಳು ಭಾಷೆಯಲ್ಲಿ ಅವಾಚ್ಯವಾಗಿ ಬೈದಿರುವುದಾಗಿ ಹಲ್ಲೆಗೊಳಗಾದ ಯುವಕ ಹೇಳಿಕೊಂಡಿದ್ದಾನೆ. 

Advertisement

ಇದೀಗ ತಮಿಳು ಚಿತ್ರವನ್ನು ರಾಜ್ಯಾದ್ಯಂತ ನಿಷೇಧ ಮಾಡಬೇಕೆಂದು ವಿವಿಧ ಸಂಘಟನೆಗಳೊಂದಿಗೆ ಕೂಡಿಕೊಂಡು ಭಾರಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿರುವುದಾಗಿ ವರದಿಯಾಗಿದೆ.

ಕನ್ನಡ ಗ್ರಾಹಕರ ಕೂಟ ತಮಿಳು ಚಿತ್ರ ನಿಷೇಧಿಸಬೇಕೆಂಬ ಕರವೇಯ ಪ್ರತಿಭಟನೆಗೆ ನಾವು ಬೆಂಬಲ ನೀಡುವುದಿಲ್ಲ ಎಂದಿದೆ. ಸಂಘಟನೆಯ ಅಧ್ಯಕ್ಷ ಗಣೇಶ್‌ ಚೇತನ್‌ ಈ ರೀತಿ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next